ಉಡುಪಿ: ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸುವ ಬದಲಾಗಿ, ವರ್ಷಕ್ಕೊಮ್ಮೆ ವಿದ್ಯುತ್ ದರವನ್ನು ( Electricity Tariff Hike ) ಹೆಚ್ಚಿಸುವ ಕುರಿತಂತ ಪ್ರಸ್ತಾವವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದಿಟ್ಟಿರುವುದಾಗಿ ಇಂಧನ ಸಚಿವ ವಿ.ಸುನೀಲ್ ಕುಮಾರ್ ( Minister V Sunil Kumar ) ಹೇಳಿದ್ದಾರೆ.
BIGG NEWS : ರಾಜ್ಯಕ್ಕೆ ಒಂದು ವರ್ಷದಲ್ಲಿ ಮಹದಾಯಿ ನೀರು ಬರಲಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿದ್ಯುತ್ ಗ್ರಾಹಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸುವುದರಿಂದ ಹೊರೆ ಆಗಲಿದೆ. ಹೀಗಾಗಿ ವರ್ಷಕ್ಕೊಮ್ಮೆ ಹೆಚ್ಚಿಸುವುದು ಸೂಕ್ತ ಎಂಬ ಚಿಂತನೆ ನಡೆದಿದೆ. ಈ ಬಗ್ಗೆ ಸಿಎಂ ಹಾಗೂ ಕೆ ಇ ಆರ್ ಸಿ ಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಕಲ್ಲಿದ್ದಲು ಶೇಖರಣೆಯಿಂದಾಗಿ ವಿದ್ಯುತ್ ಕೊರತೆ ಉಂಟಾಗುವುದಿಲ್ಲ. ದೀಪಾವಳಿ ಹಬ್ಬಕ್ಕೂ ಲೋಡ್ ಶೆಡ್ಡಿಂಗ್ ಆಗುವುದಿಲ್ಲ. ಬೇಸಿಗೆಯಲ್ಲೂ ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
BIG NEWS: ಇಂದು ನಡೆಯಬೇಕಿದ್ದ ಚಿತ್ತಾಪುರ, ಅಳಂದದ ‘ಜನಸಂಕಲ್ಪ ಯಾತ್ರೆ’ ಮುಂದೂಡಿಕೆ – ಎನ್.ರವಿಕುಮಾರ್