ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ಮತ್ತಿಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮತ್ತೊಂದು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿರೋ ಸಂದರ್ಭದಲ್ಲಿ ಮಠದಲ್ಲಿ ಹೆಣ್ಣುಮಗುವೊಂದು ಸಿಕ್ಕಿದ್ದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮುರುಘಾಶ್ರೀಗಳಿಂದ ತಮ್ಮ ಬಳಿಯಿದ್ದಂತ ಪವರ್ ಆಪ್ ಅಟರ್ನಿಯನ್ನು ( Power of Attorney ) ಹಸ್ತಾಂತರಿಸಲಾಗಿದೆ.
BIG NEWS: ಸಚಿವಾಂಕ್ಷೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶೀಘ್ರವೇ ಸಂಪುಟ ವಿಸ್ತರಣೆ ಎಂದ ಸಿಎಂ ಬೊಮ್ಮಾಯಿ
ಮುರುಘಾ ಶಿವಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ ಬಳಿಕ, ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ನ್ಯಾಯಮೂರ್ತಿ ಎಸ್ ಬಿ ವಸ್ತ್ರದಮಠ್ ಅವರನ್ನು ನೇಮಕ ಮಾಡಲಾಗಿತ್ತು. ಅವರೀಗ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಬಳಿಕ, ಮುರುಘಾಶ್ರೀಗಳ ಬಳಿಯಲ್ಲಿದ್ದಂತ ಪವರ್ ಆಪ್ ಅಟರ್ನಿಯ ಕಾರಣದಿಂದಾಗಿ ವಿವಿಧ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಮುರುಘಾ ಶ್ರೀಗಳು ನೋಟರಿ ಮಾಡಿಸಿ, ತಮ್ಮ ಬಳಿಯಲ್ಲಿದ್ದಂತ ಪವರ್ ಆಪ್ ಅಟರ್ನಿಯನ್ನು ನಿವೃತ್ತ ನ್ಯಾಯಧೀಶ ಎಸ್ ಬಿ ವಸ್ತ್ರದಮಠ್ ಗೆ ಹಸ್ತಾಂತರಿಸಿದ್ದಾರೆ.