ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು 1 ಕೋಟಿ 25 ಲಕ್ಷ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಬೇಗೂರು ಮುಖ್ಯರಸ್ತೆಯ ಕೊಪ್ಪ ಬಳಿ ಇಬ್ಬರನ್ನು ಬಂಧಿಸಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಜಿಗಣಿ ಪೊಲೀಸರಿಂದ ರಾಮಾಯಣ ಯಾದವ್ (56) ಮತ್ತು ಸಬೀರ್ ಖಾನ್ (51) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ಪೊಲೀಸರು ಈ ಒಂದು ಕಾರ್ಯಚರಣೆ ನಡೆಸಿದ್ದಾರೆ. ರಾಮಾಯಣ ಯಾದವ್ ಮತ್ತು ಸಬೀರ್ ಖಾನ್ ಬಿಹಾರ ಮೂಲದವರು ಎಂದು ತಿಳಿದುಬಂದಿದೆ.
ಪ್ರಮುಖ ಆರೋಪಿ ವಿನೋದ್ ಸಿಂಗ್ ಮತ್ತು ಬಾಬುಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಯಾರಿಗೂ ತಿಳಿಯದಂತೆ ಪೌಲ್ಟ್ರಿ ಫೀಲ್ಡ್ಸ್ ಮಧ್ಯೆ ಗಾಂಜಾ ಸಾಗಿಸಿದ್ದರು. ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಾಟ ಮಾಡಿದ್ದ ಬಂಧಿತ ಆರೋಪಿಗಳು. ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಚಂದ್ರಕಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.








