ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ಪೋಸ್ಕೋ ಕೇಸ್ ( POSCO Case ) ದಾಖಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಡಾ.ಶಿವಮೂರ್ತಿ ಶಿವಶರಣರು ಸೇರಿದಂತೆ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧವನ್ನು ನವೆಂಬರ್ 21ರವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.
ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಈ ಬಿಜೆಪಿ ಸರಕಾರಕ್ಕೆ ಆತ್ಮಸಾಕ್ಷಿಯೇ ಇಲ್ಲ- HDK ಕಿಡಿ
ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿರುವಂತ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯಗೊಂಡಿತ್ತು. ಈ ಸಂಬಂಧ ವಿಚಾರಣೆ ನಡೆಸಿದಂತ ಚಿತ್ರದುರ್ಗದ 2ನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಮತ್ತೆ ನ್ಯಾಯಾಂಗ ಬಂಧವನ್ನು ನವೆಂಬರ್ 21ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಪೋಸ್ಕೋ ಕೇಸ್ ನ ಎ.1 ಆರೋಪಿ ಡಾ.ಶಿವಮೂರ್ತಿ ಶಿವಶರಣರು, ಎ2 ಆರೋಪಿ ವಾರ್ಡನ್ ರಶ್ಮಿ, ಎ4 ಆರೋಪಿ ಪರಮಶಿವಯ್ಯ ಅವರ ನ್ಯಾಯಾಯಂಗ ಬಂಧನವನ್ನು ವಿಸ್ತರಿಸಿ ಕೋರ್ಟ್ ಇಂದು ಆದೇಶಿಸಿದೆ. ಈ ಮೂಲಕ ಸದ್ಯಕ್ಕೆ ಮುರುಘಾ ಶ್ರೀಗಳಿಗೆ ಜೈಲೇ ಗತಿ ಎನ್ನುವಂತೆ ಆಗಿದೆ.
BIG NEWS: ಕಲ್ಯಾಣ ಕರ್ನಾಟಕ ಭಾಗದಲ್ಲಿ 2 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ – ಸಿಎಂ ಬೊಮ್ಮಾಯಿ ಘೋಷಣೆ