Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಸ್ತಿ ವಿವರ ಘೋಷಣೆಯಲ್ಲಿ ಲೋಪ : ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ !

20/04/2026 8:28 PM

ಚುನಾವಣಾ ನೀತಿ ಉಲ್ಲಂಘನೆ ಆರೋಪ: ಪ್ರಧಾನಿ ಮೋದಿ ವಿರುದ್ಧ ಆಯೋಗಕ್ಕೆ 700 ನಾಯಕರು, ಕಾರ್ಯಕರ್ತರಿಂದ ದೂರು

20/04/2026 8:27 PM

ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಾಧೀಶರ ನಿರಾಕರಣೆ

20/04/2026 8:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಬೆಂಗಳೂರಲ್ಲಿ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಪೊಲೀಸರ ದಿಢೀರ್ ತಪಾಸಣೆ: 31 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ದೃಢ
KARNATAKA

SHOCKING: ಬೆಂಗಳೂರಲ್ಲಿ ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಪೊಲೀಸರ ದಿಢೀರ್ ತಪಾಸಣೆ: 31 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ದೃಢ

By kannadanewsnow0906/03/2026 9:07 AM

ಬೆಂಗಳೂರು: ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ 6 ಶಿಕ್ಷಣ ಸಂಸ್ಥೆಗಳು ಹಾಗೂ 2 ಹಾಸ್ಟೆಲ್‌ಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ ಪೊಲೀಸರು, ಮಾದಕ ದ್ರವ್ಯ ಸೇವನೆ ಪತ್ತೆ ಹಚ್ಚುವ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಶಾಕಿಂಗ್ ಮಾಹಿತಿ ಎನ್ನುವಂತೆ 31 ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್ ವ್ಯವಸ್ಥಾಪಕರ ಪೂರ್ವ ಅನುಮತಿಯೊಂದಿಗೆ ಪೊಲೀಸರು ಸುಮಾರು 1,200 ವಿದ್ಯಾರ್ಥಿಗಳಿಂದ ಮಾದರಿಗಳನ್ನು (Samples) ಸಂಗ್ರಹಿಸಿದ್ದರು. ಇದರಲ್ಲಿ ಮೊದಲ ಹಂತವಾಗಿ 585 ವಿದ್ಯಾರ್ಥಿಗಳ ಮಾದರಿಗಳನ್ನು ರ‍್ಯಾಂಡಮ್ ಆಗಿ ಪರೀಕ್ಷೆಗೆ ಒಳಪಡಿಸಿದಾಗ, 31 ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ.

ಈ ತಪಾಸಣಾ ಕಾರ್ಯಕ್ಕೆ ಪುಣ್ಯ, ಪದ್ಮದೇವಯ್ಯ, ಕಾಡೆ, ಶರಾವತಿ, ಶ್ರೀಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಮತ್ತು ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.

‘ಸನ್ಮಿತ್ರ’ ಯೋಜನೆಯಡಿ ಪುನರ್ವಸತಿ:

ಮಾದಕ ವ್ಯಸನಕ್ಕೆ ಬಲಿಯಾದ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು, ಅವರನ್ನು ಮುಖ್ಯವಾಹಿನಿಗೆ ತರಲು ಪೊಲೀಸ್ ಇಲಾಖೆಯು ‘ಸನ್ಮಿತ್ರ’ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರು ಈ ಯೋಜನೆಗೆ ಚಾಲನೆ ನೀಡಿದ್ದು, ಇದರ ಪ್ರಮುಖ ಉದ್ದೇಶಗಳು ಹೀಗಿವೆ:

  • ಕೌನ್ಸೆಲಿಂಗ್: ವ್ಯಸನಿ ವಿದ್ಯಾರ್ಥಿಗಳನ್ನು ತಜ್ಞರಿಂದ ಸಮಾಲೋಚನೆಗೆ ಒಳಪಡಿಸಿ ಅವರ ವ್ಯಸನಕ್ಕೆ ಕಾರಣಗಳನ್ನು ಹುಡುಕುವುದು.

  • ಗೌಪ್ಯತೆ ರಕ್ಷಣೆ: ವ್ಯಸನಿ ವಿದ್ಯಾರ್ಥಿಗಳ ಹೆಸರನ್ನು ಗೌಪ್ಯವಾಗಿ ಇರಿಸುವ ಮೂಲಕ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು.

  • ಮೂಲ ಪತ್ತೆ: ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥಗಳು ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವುದು.

  • ಪೋಷಕರಿಗೆ ನೆರವು: ಮಕ್ಕಳ ವ್ಯಸನದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಅವರನ್ನು ವ್ಯಸನಮುಕ್ತಗೊಳಿಸಲು ಪೊಲೀಸರು ಸತತ ನಿಗಾ ವಹಿಸಿ ಸಹಕರಿಸುವುದು.

ಜಾಗೃತಿ ಮೂಡಿಸಿದ ಪೊಲೀಸರು:

ಮಾದಕ ಪದಾರ್ಥಗಳ ಸೇವನೆಯಿಂದ ಆಗುವ ಭೀಕರ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಕಾಲೇಜು ಆಡಳಿತ ಮಂಡಳಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿ ಸಮೂಹವನ್ನು ಮಾದಕ ದ್ರವ್ಯದ ಜಾಲದಿಂದ ರಕ್ಷಿಸಲು ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

“ನಮ್ಮ ಗುರಿ ವಿದ್ಯಾರ್ಥಿಗಳನ್ನು ಬಂಧಿಸುವುದಲ್ಲ, ಬದಲಾಗಿ ಅವರನ್ನು ವ್ಯಸನದಿಂದ ಮುಕ್ತಗೊಳಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು. ‘ಸನ್ಮಿತ್ರ’ ಮೂಲಕ ನಾವು ಅವರ ಹಿತೈಷಿಯಾಗಿ ಕೆಲಸ ಮಾಡುತ್ತೇವೆ,” ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Share. Facebook Twitter LinkedIn WhatsApp Email

Related Posts

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

20/04/2026 8:13 PM2 Mins Read

ನಾಳೆ ಸಾಗರದ ಜೋಸೆಫ್ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

20/04/2026 8:10 PM1 Min Read

ಹುಬ್ಬಳ್ಳಿಯಲ್ಲಿ ‘ಹಾವಿನ ಮಳೆ’ ಎಂಬ ಸುಳ್ಳು ಸುದ್ದಿ: ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

20/04/2026 7:54 PM3 Mins Read
Recent News

ಆಸ್ತಿ ವಿವರ ಘೋಷಣೆಯಲ್ಲಿ ಲೋಪ : ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ !

20/04/2026 8:28 PM

ಚುನಾವಣಾ ನೀತಿ ಉಲ್ಲಂಘನೆ ಆರೋಪ: ಪ್ರಧಾನಿ ಮೋದಿ ವಿರುದ್ಧ ಆಯೋಗಕ್ಕೆ 700 ನಾಯಕರು, ಕಾರ್ಯಕರ್ತರಿಂದ ದೂರು

20/04/2026 8:27 PM

ಕೇಜ್ರಿವಾಲ್ ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಾಧೀಶರ ನಿರಾಕರಣೆ

20/04/2026 8:21 PM

ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮರುಜೀವ: ವಾಷಿಂಗ್ಟನ್‌ನಲ್ಲಿ ಇಂದಿನಿಂದ ನಿರ್ಣಾಯಕ ಮಾತುಕತೆ; ಸುಂಕ ಕಡಿತದ ಮೇಲೆ ಎಲ್ಲರ ಕಣ್ಣು!

20/04/2026 8:20 PM
State News
KARNATAKA

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

By kannadanewsnow5720/04/2026 8:13 PM KARNATAKA 2 Mins Read

ನಮ್ಮ ದಿನನಿತ್ಯದ ಹವ್ಯಾಸಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಷಯಗಳನ್ನು ಬಿಚ್ಚಿಡುತ್ತವೆ. ಅದರಲ್ಲಿ ಪ್ರಮುಖವಾದುದು ನಾವು ಮಲಗುವ ರೀತಿ. ಪ್ರತಿಯೊಬ್ಬರೂ…

ನಾಳೆ ಸಾಗರದ ಜೋಸೆಫ್ ನಗರದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

20/04/2026 8:10 PM

ಹುಬ್ಬಳ್ಳಿಯಲ್ಲಿ ‘ಹಾವಿನ ಮಳೆ’ ಎಂಬ ಸುಳ್ಳು ಸುದ್ದಿ: ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

20/04/2026 7:54 PM

ಮಂಡ್ಯದಲ್ಲಿ ಬಸವಣ್ಣರವರ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ; ಮದ್ದೂರು ತಾಲೂಕು ಕಛೇರಿ ಮುಂದೆ ಪ್ರತಿಭಟನೆ

20/04/2026 7:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.