ಶಿವಮೊಗ್ಗ : ಲೈಂಗಿಕ ದೌರ್ಜನ್ಯದ ಅಡಿ ಪೋಕ್ಸೋ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಾರೆಂಟ್ ಜಾರಿಯಾದ ವಿಚಾರಕ್ಕೆ ಅವರ ಪುತ್ರ ಬಿವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದು, ನಮ್ಮ ತಂದೆ ಬಿಎಸ್ ಯಡಿಯೂರಪ್ಪ ಹಾಗೂ ನಮ್ಮ ಕುಟುಂಬದ ಮನಸ್ಥಿತಿ ಕೂಗಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಪ್ರಕರಣದಲ್ಲಿ ಬಿಎಸ್ ವೈ ಗೆ ಅರೆಸ್ಟ್ ವಾರೆಂಟ್ ವಿಚಾರವಾಗಿ ಇದರಲ್ಲಿ ರಾಜಕೀಯ ಉದ್ದೇಶ ಕಾಣುತ್ತಿದೆ ಎಂದು ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ ಹೇಳಿಕೆ ನೀಡಿದ್ದು, ಯಾವುದೇ ಹುರುಳಿಲ್ಲವೆಂದು ಬಿ ರಿಪೋರ್ಟ್ ಹಾಕುವ ಕೇಸ್ ಇದು. ಇದರಲ್ಲೂ ರಾಜಕಾರಣವನ್ನು ಹುಡುಕಿದ್ದಾರೆ. ಆ ಮಹಿಳೆ ಅನೇಕ ಅಧಿಕಾರಿಗಳ ವಿರುದ್ಧವೂ ಕೂಡ ಕೆಸ್ ದಾಖಲಿಸಿದ್ದರು ಎಂದು ತಿಳಿಸಿದರು.
ರಾಹುಲ್ ಗಾಂಧಿ ಕೋರ್ಟಿಗೆ ಬಂದು ಹೋದ ಮೇಲೆ ಇಂತಹ ಘಟನೆ ನಡೆದಿದೆ.ಬಿಎಸ್ ಯಡಿಯೂರಪ್ಪ, ಹಾಗೂ ನಮ್ಮ ಕುಟುಂಬದವರ ಮನಸ್ಥಿತಿ ಕುಗ್ಗಿಸಲು ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ.ನ್ಯಾಯಾಲಯದಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಇದರಲ್ಲಿ ಸತ್ಯಾಸತ್ಯತೆ ಇಲ್ಲ ಎಂದು ಗೃಹ ಸಚಿವರೆ ಹೇಳಿದ್ದರು.ಏನು ಪುರಾವೆ ಇಲ್ಲದ ಕೆ ಎಸ್ ನಲ್ಲಿ ಈ ರೀತಿ ಬೆಳವಣಿಗೆಯಾಗಿದೆ ಎಂದು ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಸಂಸದರ ರಾಘವೇಂದ್ರ ಹೇಳಿದರು.