ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಂಧನಕ್ಕೊಳಗಾಗಿರುವ ಪ್ರಕರಣದ ಸಂಬಂಧ ಈಗಾಗಲೇ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ನ್ಯಾಯಾಲಯವು ಪೊಲೀಸ್ ವಶಕ್ಕೆ ನೀಡಿದೆ. ಅವರ ವಿಚಾರಣೆ ಕೂಡ ಚುರುಕಾಗಿ ಸಾಗಿದೆ. ಈ ವೇಳೆಯಲ್ಲಿಯೇ ಎರಡನೇ ಆರೋಪಿ ವಾರ್ಡನ್ ರಶ್ಮಿ ಅವರನ್ನು ಪೋಲಿಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಪೋಲಿಸರು ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ವಾರ್ಡನ್ ರಶ್ಮಿ ಅವರು ನ್ಯಾಯಾಂಗ ಬಂಧನದ ಶಿವಮೊಗ್ಗ ಕಾರಾಗೃಹದಲ್ಲಿರು ಅವರನ್ನು ಹೆಚ್ಚಿನ ತನಿಖೆಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ವಹಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಗೆ ದಿನಾಂಕವನ್ನು ಕೋರ್ಟ್ ನಿಗದಿ ಪಡಿಸಿಲ್ಲ. ಕೋರ್ಟ್ ವಿಚಾರಣೆ ನಡೆಸೋ ದಿನದಂದು ಯಾವ ಆದೇಶ ಹೊರಡಿಸಲಿದೆ ಎಂಬುದನ್ನು ಕಾದು ನೋಡಬೇಕು.
ಅಂದಹಾಗೇ ಪೋಕ್ಸೊ ಕಾಯ್ದೆಯಡಿ ಮುರುಘಾ ಶ್ರೀಗಳ ಬಂಧನದ ಬೆನ್ನಲ್ಲೇ ಇದೀಗ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರಿಂದ ಪ್ರಕರಣದ 2 ನೇ ಆರೋಪಿ ಲೇಡಿ ವಾರ್ಡನ್ ರಶ್ಮಿ ಅವರನ್ನು ಸೆಪ್ಟೆಂಬರ್ 2ರಂದು ಬಂಧಿಸಿದ್ದರು. ಲೇಡಿ ವಾರ್ಡನ್ ರಶ್ಮಿ ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯದ್ದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಬಳಿಕ ಚಿತ್ರದುರ್ಗದಲ್ಲಿ ಮಹಿಳಾ ಕಾರಾಗೃಹ ಇಲ್ಲದ ಕಾರಣ ಅವರನ್ನು ಶಿವಮೊಗ್ಗದಲ್ಲಿ ಮಹಿಳಾ ಕಾರಾಗೃಹಕ್ಕೆ ಕಳಿಸಲಾಗಿತ್ತು.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ