ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಬಿರುಸಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾಮಾನ್ಯ ಜನರಂತೆ ರಸ್ತೆ ಬದಿಯ ಗಾಡಿಯಲ್ಲಿ ಬಂಗಾಳದ ಪ್ರಸಿದ್ಧ ತಿಂಡಿ ‘ಝಲ್ಮುರಿ’ (Jhalmuri) ಸವಿದು ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ವ್ಯಾಪಾರಿ ಕೇಳಿದ ಒಂದು ಪ್ರಶ್ನೆ ಮತ್ತು ಅದಕ್ಕೆ ಮೋದಿ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಅವರು ಝಲ್ಮುರಿ ತಯಾರಿಸಲು ಹೇಳಿದಾಗ, ವ್ಯಾಪಾರಿಯು ಮುಗ್ಧತೆಯಿಂದ “ಸರ್, ನೀವು ಈರುಳ್ಳಿ ತಿಂತೀರಾ?” (Pyaaz Khate Hain?) ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಪ್ರಧಾನಿ, “ಹೌದು, ಖಂಡಿತಾ ಹಾಕಿ, ನಾನು ಈರುಳ್ಳಿ ತಿನ್ನುತ್ತೇನೆ” ಎಂದು ಉತ್ತರಿಸಿದ್ದಾರೆ.
ಸಾಮಾನ್ಯವಾಗಿ ವಿವಿಐಪಿಗಳಿಗೆ ಆಹಾರ ನೀಡುವಾಗ ಅನೇಕ ನಿರ್ಬಂಧಗಳಿರುತ್ತವೆ ಎಂಬ ಗೊಂದಲದಿಂದ ವ್ಯಾಪಾರಿ ಈ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ. ಆದರೆ ಪ್ರಧಾನಿಯವರ ಸರಳತೆ ಮತ್ತು ಸಾಮಾನ್ಯ ಜನರಂತೆ ತಿಂಡಿ ಸವಿದ ರೀತಿ ಅಲ್ಲಿದ್ದವರ ಮನಗೆದ್ದಿದೆ.
ঝাড়গ্রামে ঝালমুড়ি খাবার বিরতি! pic.twitter.com/t0TcDeONxt
— Narendra Modi (@narendramodi) April 19, 2026








