ಬೆಂಗಳೂರು : ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸನ್ ರೈಸ್ ಸರ್ಕಲ್ ಬಳಿ ಇರುವ ಶ್ರೀರಾಂಪುರ ರುದ್ರಭೂಮಿ ಪರಿಶೀಲನೆಯನ್ನು ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್ ರವರು ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ಮಾಡಿದರು.
ಮುನುಷ್ಯನ ತನ್ನ ಅಂತ್ಯ ಕಂಡ ನಂತರ ಅಂತಿಮ ಸಂಸ್ಕಾರ ಮಾಡುವ ರುದ್ರಭೂಮಿ ಸುವ್ಯವಸ್ಥೆಯಿಂದ ಮತ್ತು ಸ್ವಚ್ಚತೆಯಿಂದ ಕೂಡಿರಬೇಕು.ಶ್ರೀರಾಂಪುರ ರುದ್ರಭೂಮಿಯಲ್ಲಿ ನೀರಿನ ವ್ಯವಸ್ಥೆ ಮತ್ತು ಸ್ವಚ್ಚತೆ ಇಲ್ಲದಿರುವುದು ಹಾಗೂ ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಹಣ ಸಂದಾಯ ಮಾಡಬೇಕು .
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಸ್ಲಂಗಳು ಇದೆ.ಆರ್ಥಿಕವಾಗಿ ಕಡುಬಡವರು ವಾಸವಾಗಿದ್ದಾರೆ ಅದರಿಂದ ಅಂತ್ಯಸಂಸ್ಕಾರಕ್ಕೆ ಕಡಿಮೆ ವೆಚ್ಚ ನಿಗದಿ ಪಡಿಸಲಾಗಿದೆ.
ಶ್ರೀರಾಂಪುರ ರುದ್ರಭೂಮಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ಪರಿಸರ ಸ್ವಚ್ಚತೆ ಹಾಗೂ ತಡೆಗೋಡೆ, ಪೂಜಾ ಸ್ಥಳ ನವೀಕರಣ ಮಾಡಿ ಶ್ರೀರಾಂಪುರ ರುದ್ರಭೂಮಿ ಚಿರಶಾಂತಿಧಾಮವಾಗಿ ಮಾಡಲಾಗುವುದು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅವಶ್ಯಕತೆ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಲು ಯೋಜನೆ ರೂಪಿಸಿ ಕಾರ್ಯಗತ ಮಾಡಲಾಗುತ್ತಿದೆ.ಜನರ ಆಶಯದಂತೆ ನಮ್ಮ ನಡೆ ಇಂದು ನನ್ನ ಉದ್ದೇಶ ಎಂದು ದಿನೇಶ್ ಗುಂಡೂರಾವ್ ರವರು ಹೇಳಿದರು.