ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಇನ್ಮುಂದೆ ಪೋಟೋ, ವೀಡಿಯೋ ಬ್ಯಾನ್ ಮಾಡಿ ಆದೇಶಿಸಲಾಗಿತ್ತು. ಆದ್ರೇ ಇದು ಜನವಿರೋಧಿ ಸುತ್ತೋಲೆಯಾಗಿದೆ. KRS ಪಕ್ಷದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಬಳಸುತ್ತಿರುವ ನೀಚ ಅಸ್ತ್ರ ಎಂಬುದಾಗಿ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕಿಡಿಕಾರಿದ್ದಾರೆ.
ಈ ಕುರಿತಂತೆ ಫೇಸ್ ಬುಕ್ ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ರಾಜ್ಯ ಸರ್ಕಾರ ಇಂದು ಹೊರಡಿಸಿರುವಂತ ಆದೇಶ ಕೆ ಆರ್ ಎಸ್ ಪಕ್ಷ ರಾಜ್ಯಾಧ್ಯಂತ ನಡೆಸುತ್ತಿದ್ದಂತ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದೆ ಇಡುತ್ತಿತ್ತು. ಆದ್ರೇ ಈ ಆದೇಶ ಕೆ ಆರ್ ಎಸ್ ಪಕ್ಷದ ಜನಪರ ಹೋರಾಟವನ್ನು ಹತ್ತಿಕ್ಕಲು ತಂದಿರುವಂತ ಆದೇಶ ಇದಾಗಿದೆ ಎಂದು ಕಿಡಿಕಾರಿದರು.
ಇದು ಸಂಪೂರ್ಣವಾಗಿ ಜನವಿರೋಧಿ ಆದೇಶ, ಜನರ ಹಕ್ಕನ್ನು ಧಮನಮಾಡೋ ಉದ್ದೇಶವಾಗಿದೆ. ಕೆಲ ಭ್ರಷ್ಟ ಅಧಿಕಾರಿಗಳನ್ನು, ಸರ್ಕಾರಿ ನೌಕರರನ್ನು ರಕ್ಷಣೆ ಮಾಡೋದಕ್ಕಾಗಿ ತಂದಿರುವಂತ ಆದೇಶವಾಗಿದೆ ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಆದೇಶಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಈ ಬಗ್ಗೆ ಕಾನೂನು ಪರಿಣತರನ್ನು ಸಂಪರ್ಕಿಸಿ ಹೋರಾಟ ಮಾಡುತ್ತೇವೆ. ದೇಶದಲ್ಲಿ ಯಾವುದೇ ರಾಜ್ಯಗಳಲ್ಲಿ ಇಂತಹ ಆದೇಶವಿಲ್ಲ. ಹೀಗಿದ್ದೂ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸೋ ಸಲುವಾಗಿ ತಂದಿರುವಂತ ಆದೇಶವಾಗಿದೆ ಎಂದು ಕಿಡಿಕಾರಿದರು.
ಸರ್ಕಾರದ ಈ ಆದೇಶವನ್ನು ಕೆ ಆರ್ ಎಸ್ ಪಕ್ಷ ಖಂಡಿಸಲಿದೆ. ಈ ಆದೇಶ ವಿರೋಧಿಸಿ ರಾಜ್ಯಾಧ್ಯಂತ ಸರ್ಕಾರಿ ಕಚೇರಿಗಳ ಮುಂದೆ ಲೈವ್ ವೀಡಿಯೋ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಆಗ ಯಾವ ರೀತಿಯಾಗಿ ದೂರು ನೀಡಲಾಗುತ್ತದೆ ಎಂಬುದನ್ನು ನೋಡಲಾಗುತ್ತದೆ. ನಾವು ಈ ಆದೇಶವನ್ನು ವಿರೋಧಿಸಿ ಕಾನೂನು ಹೋರಾಟ ಮಾಡಲಿದ್ದೇವೆ ಎಂಬುದಾಗಿ ಹೇಳಿದರು.