ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದಂತೆ, ಬಿಜೆಪಿಯು ಜೂನ್ 17ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸದಸ್ಯೆ ಮಾಡಿಕೊಂಡಿದೆ ಇನ್ನೊಂದೆಡೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದು, ತನ್ನ ಗ್ಯಾರಂಟಿ/ವಾರಂಟಿಗಳೆಲ್ಲ ಕೆಲಸ ಮಾಡದೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಸರ್ಕಾರ ಈಗ ಜನಸಾಮಾನ್ಯರ ಮೇಲೆ ಬರೆ ಹಾಕುವ ಕೆಲಸ ಮಾಡಿದೆ. ಪೆಟ್ರೋಲ್ ಹೆಚ್ಚಳದಿಂದ ಬರಿ ಜನಸಾಮಾನ್ಯನಿಗೆ ತೊಂದರೆ ಆಗುವುದಿಲ್ಲ, ಇದರಿಂದ ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ (ಕನ್ಸೂಮರ್ ಪ್ರೈಸ್ ಇಂಡೆಕ್ಸ್) ಕೂಡ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಆರ್ಥಿಕ ಜ್ಞಾನವಿಲ್ಲರಿವುದು ನಿಜಕ್ಕೂ ಆಶ್ಚರ್ಯಕರ.
ಇಷ್ಟೇ ಅಲ್ಲದೆ ಸಾರಿಗೆ ಇಲಾಖೆಯ ವೆಚ್ಚ ಸೇರಿದಂತೆ, ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತದೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದರಿಂದ ಜನರಿಗೆ/ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬ ಅಂಶ ಅತಿ ಹೆಚ್ಚು ಬಜೆಟ್ ಮಂಡಿಸಿರುವ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ತಿಳಿಯದೆ ಇರುವ ವಿಷಯವೇನಲ್ಲ.
ಜನಕಲ್ಯಾಣ ಯೋಜನೆಗಳಿಂದ, ಅಭಿವೃದ್ಧಿ ಕಾರ್ಯಗಳಿಂದ ಜನರ ಮನ್ನಣೆ ಗಳಿಸಬೇಕಾಗಿದ್ದ ಸರ್ಕಾರ ವೋಟು ಗಳಿಸಲು ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಈಗ ಆ ಯೋಜನೆಗಳನ್ನು ಕೈಬಿಡಲು ಆಗದೆ, ಕೈಗೆತ್ತಿಕೊಂಡರೆ ಹಣದ ಅಭಾವದ ಕೊರತೆಯಿಂದ ದಿನಬಳಕೆ ವಸ್ತುಗಳನ್ನು ಹೆಚ್ಚಿಸುತ್ತಿರುವುದು ಜನವಿರೋಧಿ ನೀತಿಯಷ್ಟೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತನ್ನ ಗ್ಯಾರಂಟಿ/ವಾರಂಟಿಗಳೆಲ್ಲ ಕೆಲಸ ಮಾಡದೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಸರ್ಕಾರ ಈಗ ಜನಸಾಮಾನ್ಯರ ಮೇಲೆ ಬರೆ ಹಾಕುವ ಕೆಲಸ ಮಾಡಿದೆ. ಪೆಟ್ರೋಲ್ ಹೆಚ್ಚಳದಿಂದ ಬರಿ ಜನಸಾಮಾನ್ಯನಿಗೆ ತೊಂದರೆ ಆಗುವುದಿಲ್ಲ, ಇದರಿಂದ ಹಣದುಬ್ಬರ, ಗ್ರಾಹಕ ಬೆಲೆ ಸೂಚ್ಯಂಕ (ಕನ್ಸೂಮರ್ ಪ್ರೈಸ್ ಇಂಡೆಕ್ಸ್) ಕೂಡ ಹೆಚ್ಚಾಗುತ್ತದೆ ಎಂಬ ಸಾಮಾನ್ಯ… pic.twitter.com/Zjofwx8Abs
— Basanagouda R Patil (Yatnal) (@BasanagoudaBJP) June 15, 2024