Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರ : ಕಲಬುರಗಿಯಲ್ಲಿ ದಾಖಲೆಯ 45 ಡಿಗ್ರಿ ತಾಪಮಾನ ದಾಖಲು.!
KARNATAKA

ರಾಜ್ಯಾದ್ಯಂತ ಬಿಸಿಲಿನ ಬೇಗೆಗೆ ಜನರು ತತ್ತರ : ಕಲಬುರಗಿಯಲ್ಲಿ ದಾಖಲೆಯ 45 ಡಿಗ್ರಿ ತಾಪಮಾನ ದಾಖಲು.!

By kannadanewsnow57

ಕಲಬುರಗಿ: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ‘ಬಿಸಿಲ ನಗರಿ’ ಕಲಬುರಗಿ ಅಕ್ಷರಶಃ ಕೆಂಡದಂತಾಗಿದೆ. ಶನಿವಾರ ಜಿಲ್ಲೆಯ ಕಾಳಗಿಯ ಕೋಡ್ಲಿ ಗ್ರಾಮದಲ್ಲಿ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬೇಸಿಗೆಯಲ್ಲೇ ರಾಜ್ಯದ ಗರಿಷ್ಠ ತಾಪಮಾನವಾಗಿದೆ.

ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿಯಲ್ಲಿ 45.4 ಡಿಗ್ರಿ ಸೆಲ್ಸಿಯಸ್, ಚಿಂಚೋಳಿಯ ಇನಾಪುರದಲ್ಲಿ 45 ಡಿಗ್ರಿ, ಆಳಂದದ ನರೋಣಾದಲ್ಲಿ 44.7 ಡಿಗ್ರಿ ಹಾಗೂ ಅಫಜಲಪುರದ ಆತನೂರಿನಲ್ಲಿ 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ.ಇದಕ್ಕೂ ಮೊದಲು ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ಬಿಸಿಗಾಳಿ ಬೀಸಿದ್ದು, ಆಗಲೂ 45.4 ಡಿಗ್ರಿ ತಾಪಮಾನ ದಾಖಲಾಗಿತ್ತು. ಇದು ಏಪ್ರಿಲ್ ತಿಂಗಳ 53 ವರ್ಷಗಳ ದಾಖಲೆಯನ್ನೇ ಮುರಿದಿತ್ತು. ಶನಿವಾರ ಮತ್ತೊಮ್ಮೆ ಅಷ್ಟೇ ಪ್ರಮಾಣದ ತಾಪಮಾನ ದಾಖಲಾಗುವ ಮೂಲಕ ಈ ಬೇಸಿಗೆಯ ಅತ್ಯಧಿಕ ತಾಪಮಾನವಾಗಿ ಗಮನಸೆಳೆದಿದೆ.

ಬಿಸಿಲಿಗೆ ಕಾರ್ಮಿಕನ ಸಾವು

ಯಾದಗಿರಿ ಜಿಲ್ಲೆಯ ಸುರಪುರ ಸಮೀಪದ ಸತ್ಯಂಪೇಟೆ ಗ್ರಾಮದಲ್ಲಿ ತೀವ್ರ ಬಿಸಿಲಿನ ತಾಪಕ್ಕೆ ಸಿದ್ದಪ್ಪ ಶರಣಪ್ಪ ಕೊಂಡಗೂಳಿ (30) ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಸುರಪುರದ ಹಸನಾಪುರ ಪೆಟ್ರೋಲ್ ಬಂಕ್ ಸಮೀಪ ಕೂಲಿ ಕೆಲಸಕ್ಕೆ ತೆರಳಿದ್ದ ಸಿದ್ದಪ್ಪ ಅವರು ಬಿಸಿಲಿನ ತಾಪದಿಂದ ಸುಸ್ತಾಗಿ ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುರಪುರದಲ್ಲಿ ಶನಿವಾರ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಜಿಲ್ಲೆಯಾದ್ಯಂತ ಬಿಸಿಗಾಳಿ ಮುಂದುವರಿದಿದ್ದು, ಜನರು ಬೆಳಿಗ್ಗೆ 10 ಗಂಟೆಯ ನಂತರ ಸಂಜೆ 5 ಗಂಟೆಯವರೆಗೆ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಾಪಮಾನ 44 ಡಿಗ್ರಿಗಿಂತ ಅಧಿಕ ಪ್ರಮಾಣದಲ್ಲೇ ದಾಖಲಾಗುತ್ತಿದೆ.

People across the state are suffering from heatstroke: Kalaburagi records a record temperature of 45 degrees!
Share. Facebook Twitter LinkedIn WhatsApp Email

Related Posts

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

2 Mins Read

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

1 Min Read

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

1 Min Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.