Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

ಚೀನಾ ಪ್ರವಾಸ ಆರಂಭಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್: ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಉನ್ನತ ಮಟ್ಟದ ಮಾತುಕತೆ!

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚೀನಾ ಪ್ರವಾಸ ಆರಂಭಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್: ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಉನ್ನತ ಮಟ್ಟದ ಮಾತುಕತೆ!
INDIA

ಚೀನಾ ಪ್ರವಾಸ ಆರಂಭಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್: ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಉನ್ನತ ಮಟ್ಟದ ಮಾತುಕತೆ!

By ಗೋಪಾಲ್‌ ಎನ್‌

ಇಸ್ಲಾಮಾಬಾದ್:ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ನಾಲ್ಕು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಶನಿವಾರ ಚೀನಾ ತಲುಪಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಪಾಕಿಸ್ತಾನಕ್ಕೆ ಈ ಪ್ರವಾಸವು ಅತ್ಯಂತ ಮಹತ್ವದ್ದಾಗಿದ್ದು, ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರೀಮಿಯರ್ ಲಿ ಕಿಯಾಂಗ್ ಅವರೊಂದಿಗೆ ಶೆಹಬಾಜ್ ಷರೀಫ್ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಚೀನಾ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಾಂಧವ್ಯದ 75ನೇ ವರ್ಷದ ಹಿನ್ನೆಲೆಯಲ್ಲಿ ಈ ಭೇಟಿ ಆಯೋಜನೆಗೊಂಡಿದೆ. ಪ್ರವಾಸದ ಮೊದಲ ಹಂತವಾಗಿ ಚೀನಾದ ಹಾಂಗ್‌ಝೌ ನಗರಕ್ಕೆ ಆಗಮಿಸಿರುವ ಷರೀಫ್, ಅಲ್ಲಿ ಮಾಹಿತಿ ತಂತ್ರಜ್ಞಾನ (IT), ಕೃಷಿ ಮತ್ತು ಇಂಧನ ವಲಯದ ಪ್ರಮುಖ ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ. ಅಲ್ಲದೆ ಚೀನಾದ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆ ‘ಅಲಿಬಾಬಾ’ ಪ್ರಧಾನ ಕಚೇರಿಗೂ ಅವರು ಭೇಟಿ ನೀಡಲಿದ್ದಾರೆ.

 ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ವಿಸ್ತರಿಸುವ ಮತ್ತು ಚೀನಾ ಕಂಪನಿಗಳಿಂದ ಹೆಚ್ಚಿನ ಹೂಡಿಕೆ ಆಕರ್ಷಿಸುವ ಕುರಿತು ಪ್ರಮುಖ ಒಪ್ಪಂದಗಳು ನಡೆಯಲಿವೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾದಿಂದ ಮತ್ತಷ್ಟು ಹಣಕಾಸಿನ ನೆರವು ಹಾಗೂ ಹಳೆಯ ಸಾಲಗಳ ಮರುಪಾವತಿ ಅವಧಿ ವಿಸ್ತರಣೆಯ ಬಗ್ಗೆ ಷರೀಫ್ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಪ್ರಾದೇಶಿಕ ಭದ್ರತೆ ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ಉಭಯ ದೇಶಗಳ ನಾಯಕರು ಕಾರ್ಯತಂತ್ರದ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.

Pakistan PM Shehbaz Sharif begins China visit to hold talks with Xi Jinping
Share. Facebook Twitter LinkedIn WhatsApp Email

Related Posts

ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಭಾರಿ ತಿರುವು: ಪತಿ ಸಮರ್ಥ್ ಸಿಂಗ್‌ಗೆ 7 ದಿನಗಳ ಪೊಲೀಸ್ ಕಸ್ಟಡಿ!

2 Mins Read

ಮರಣೋತ್ತರ ಪ್ರಾಥಮಿಕ ತನಿಖಾ ವರದಿಯಲ್ಲಿ ಹೆಸರಿಲ್ಲದಿದ್ದರೆ ಆರೋಪಿ ನಿರಪರಾಧಿಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

2 Mins Read

​ಕುಸ್ತಿಪಟು ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೆಹಲಿ ಹೈಕೋರ್ಟ್ ಹಸಿರು ನಿಶಾನೆ!

3 Mins Read
Recent News

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

ಚೀನಾ ಪ್ರವಾಸ ಆರಂಭಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್: ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಉನ್ನತ ಮಟ್ಟದ ಮಾತುಕತೆ!

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

ಟ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಭಾರಿ ತಿರುವು: ಪತಿ ಸಮರ್ಥ್ ಸಿಂಗ್‌ಗೆ 7 ದಿನಗಳ ಪೊಲೀಸ್ ಕಸ್ಟಡಿ!

State News
KARNATAKA

ಚಾಲಕನ ಮಾನವೀಯತೆಗೆ ಹೈಕೋರ್ಟ್ ಶ್ಲಾಘನೆ: ಅಪಘಾತದ ನಂತ್ರ ಗಾಯಾಳು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಜೈಲು ಶಿಕ್ಷೆ ಕಡಿತ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ತಕ್ಷಣವೇ ಮಾನವೀಯತೆ ಪ್ರದರ್ಶಿಸಿ, ಗಾಯಾಳುವನ್ನು ತಾವೇ ಖುದ್ದಾಗಿ ಆಸ್ಪತ್ರೆಗೆ ದಾಖಲಿಸುವ ಚಾಲಕರ ನಡೆಗೆ ಕರ್ನಾಟಕ…

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಏರಿಕೆ: ಸಚಿವ ಸಂತೋಷ್ ಲಾಡ್

BIG Alert: ಫ್ರಿಡ್ಜ್ ಕ್ಲೀನ್ ಮಾಡೋ ಮುನ್ನ ಎಚ್ಚರ! ದೊಡ್ಡಬಳ್ಳಾಪುರದಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.