Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶದಲ್ಲಿ ಶೇ. 35 ರಿಂದ 40 ರಷ್ಟು ವಕೀಲರು ನಕಲಿ: ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಆಘಾತಕಾರಿ ಹೇಳಿಕೆ

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ
KARNATAKA

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆಯನ್ನು ಪುನಾರಂಭ ಮಾಡಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು ಬೆಂಗಳೂರು-ಬೀದರ್- ಬೆಂಗಳೂರು ಮತ್ತು ಬೆಂಗಳೂರು- ಕಲಬುರಗಿ- ಬೆಂಗಳೂರು ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸಲಿದೆ. ಇದಕ್ಕೆ ಬೆಂಬಲ ನೀಡಲು ಸರಕಾರವು 28.47 ಕೋಟಿ ರೂ.ಗಳನ್ನು ‘ವಯಬಲಿಟಿ ಗ್ಯಾಪ್ ಫಂಡಿಂಗ್’ ಆಗಿ ಕೊಡುತ್ತಿದೆ. ಎರಡೂ ಕಡೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕಿಂಗ್ ಕೂಡ ಆರಂಭವಾಗಿದೆ ಎಂದಿದ್ದಾರೆ.

ಕಲಬುರಗಿಗೆ ಇದ್ದ ವಿಮಾನಸೇವೆಯು ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್ ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವಿಶೇಷ ನೆರವಿನಿಂದ ಒಂದು ವಿಮಾನ ಓಡಾಡುತ್ತಿತ್ತು. ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ವಹಿವಾಟು ಇತ್ಯಾದಿಗಳ ಬೆಳವಣಿಗೆಯನ್ನು ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನಸೇವೆಯನ್ನು ಮತ್ತೆ ಆರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರಕಾರದ ಕಾಳಜಿಯಾಗಿದೆ. ಇದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ಪಾಟೀಲ ಹೇಳಿದ್ದಾರೆ.

ಬೀದರ್ ಮತ್ತು ಕಲಬುರಗಿಗೆ ವಿಮಾನಸೇವೆಯ ಮರುಆರಂಭಕ್ಕೆಂದು ಸಚಿವರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಭಾಗದ ಸಚಿವ ಸಹೋದ್ಯೋಗಿಗಳು ಮತ್ತು ಹಲವು ವಿಮಾನಯಾನ ಸಂಸ್ಥೆಗಳ ಪ್ರಮುಖರ ಜತೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

2 Mins Read

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

2 Mins Read

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

1 Min Read
Recent News

ದೇಶದಲ್ಲಿ ಶೇ. 35 ರಿಂದ 40 ರಷ್ಟು ವಕೀಲರು ನಕಲಿ: ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಆಘಾತಕಾರಿ ಹೇಳಿಕೆ

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

State News
KARNATAKA

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ…

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.