Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!
KARNATAKA

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಜನತೆಯ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಾರ್ಥಕ ಸಂದರ್ಭದಲ್ಲಿ, ಸರ್ಕಾರವು ತನ್ನ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸಿದೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿಯೊಂದು ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ‘ನುಡಿದಂತೆ ನಡೆದ’ ಹೆಮ್ಮೆ ಸರ್ಕಾರದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಶಕ್ತ, ಸಮೃದ್ಧ ಮತ್ತು ಸ್ವಾಭಿಮಾನಿ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ಸರ್ಕಾರವು ಬಹಳಷ್ಟು ದೂರ ಕ್ರಮಿಸಿದ್ದು, ಈ ಅಭಿವೃದ್ಧಿ ಪ್ರಯತ್ನಗಳು ಮುಂದೆ ಇನ್ನಷ್ಟು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಸಾಗಲಿವೆ ಎಂದು ಸರ್ಕಾರ ಭರವಸೆ ನೀಡಿದೆ.

ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಕಬ್ಬು ಬೆಳೆಗಾರರ ಆರ್ಥಿಕ ಸಬಲೀಕರಣ ಹಾಗೂ ಸಕ್ಕರೆ ಕಾರ್ಖಾನೆಗಳ ಮೂಲಸೌಕರ್ಯ ವೃದ್ಧಿಗಾಗಿ ಕೈಗೊಂಡಿರುವ ಪ್ರಮುಖ ಸೇವೆ ಮತ್ತು ಸಾಧನೆಗಳ ವಿವರಗಳು ಹೀಗಿವೆ:

ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿ ಮತ್ತು ಆದೇಶ

ಕಬ್ಬು ಬೆಳೆಗಾರರಿಗೆ ನ್ಯಾಯಸಮ್ಮತ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ 2025-26ನೇ ಹಂಗಾಮಿನಲ್ಲಿ ಕಬ್ಬಿಗೆ ಹೆಚ್ಚುವರಿ ಬೆಲೆಯನ್ನು ನಿಗದಿಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ ಶೇ. 10.25 ರಷ್ಟು ಇಳುವರಿ ಇರುವ ಕಬ್ಬಿಗೆ ಪ್ರತಿ ಟನ್‌ಗೆ ₹3,200 ಹಾಗೂ ಶೇ. 11.25 ರಷ್ಟು ಇಳುವರಿ ಹೊಂದಿರುವ ಕಬ್ಬಿಗೆ ಪ್ರತಿ ಟನ್‌ಗೆ ₹3,300 ದರವನ್ನು ನಿಗದಿಪಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಕಬ್ಬು ಬೆಳೆಗಾರರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಕ್ಕಂತಾಗಿದೆ.

ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ.… pic.twitter.com/ryZm8PNYrL

— DIPR Karnataka (@KarnatakaVarthe) May 23, 2026

ಸಕ್ಕರೆ ಕಾರ್ಖಾನೆ ಪ್ರದೇಶಗಳ ರಸ್ತೆ ಅಭಿವೃದ್ಧಿ

ಕಬ್ಬು ಸಾಗಣೆಯನ್ನು ಸರಳಗೊಳಿಸಲು ಮತ್ತು ಸಕ್ಕರೆ ಕಾರ್ಖಾನೆಗಳ ಸುತ್ತಮುತ್ತಲಿನ ಗ್ರಾಮೀಣ ಭಾಗದ ರಸ್ತೆಗಳನ್ನು ಬಲಪಡಿಸಲು ಸರ್ಕಾರ ವಿಶೇಷ ಗಮನ ಹರಿಸಿದೆ. ‘ಸಕ್ಕರೆ ಕಾರ್ಖಾನೆಗಳ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆ’ಯಡಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ₹8.03 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಈಗಾಗಲೇ ₹4.03 ಕೋಟಿ ಹಣವನ್ನು ಅತ್ಯಂತ ಯಶಸ್ವಿಯಾಗಿ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ವ್ಯಯಿಸಲಾಗಿದೆ. ಇದರಿಂದ ಕಬ್ಬು ಸಾಗಣೆ ವಾಹನಗಳ ಸಂಚಾರ ಸುಗಮಗೊಂಡಿದೆ.

ಕಬ್ಬು ಅರೆಯುವ ದಿನಾಂಕ ನಿಗದಿ ಹಾಗೂ ಇಳುವರಿ ಸುಧಾರಣೆ

ರಾಜ್ಯದ ದಕ್ಷಿಣ ಮತ್ತು ಉತ್ತರ ಭಾಗದ ಹವಾಮಾನ ಮತ್ತು ಕಬ್ಬಿನ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, 2024-25 ಮತ್ತು 2025-26ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ (Crushing) ದಿನಾಂಕಗಳನ್ನು ಮುಂಚಿತವಾಗಿಯೇ ನಿಗದಿಪಡಿಸಲಾಗಿದೆ. ಸರ್ಕಾರದ ಈ ವ್ಯವಸ್ಥಿತ ರಣತಂತ್ರದಿಂದಾಗಿ ಕಬ್ಬಿನ ಇಳುವರಿ (Recovery) ಹಾಳಾಗುವುದು ತಪ್ಪಿದೆ. ಇದರ ನೇರ ಧನಾತ್ಮಕ ಪರಿಣಾಮವಾಗಿ ರಾಜ್ಯದಲ್ಲಿ ಒಟ್ಟಾರೆ ಸಕ್ಕರೆ ಉತ್ಪಾದನೆ ಹಾಗೂ ಇಳುವರಿಯ ಗುಣಮಟ್ಟದಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದೆ.

BREAKING: ಆನ್‌ಲೈನ್ ಟಿಕೆಟ್ ಬುಕಿಂಗ್ ಸಂಸ್ಥೆಗಳ ಸುಲಿಗೆಗೆ ಬ್ರೇಕ್: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದೇಶ

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

1 Min Read

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

2 Mins Read

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

1 Min Read
Recent News

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

BREAKING: ಆನ್‌ಲೈನ್ ಟಿಕೆಟ್ ಬುಕಿಂಗ್ ಸಂಸ್ಥೆಗಳ ಸುಲಿಗೆಗೆ ಬ್ರೇಕ್: ತನಿಖೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆದೇಶ

State News
KARNATAKA

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಬೀದರ್ ಮತ್ತು ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ…

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

SHOCKING: ಬೆಂಗಳೂರಲ್ಲಿ ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.