ಸಿನಿಮಾ ಡೆಸ್ಕ್ : ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾಗಿ ಕಾಣಿಸಿಕೊಂಡಿರುವ ‘ಪದವಿಪೂರ್ವ’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಹಿರಿಯ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಚಿತ್ರತಂಡ ‘ಪದವಿ ಪೂರ್ವ’ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿತು.
1990 ರ ದಶಕದ ಹಿನ್ನೆಲೆಯಲ್ಲಿ ‘ಪದವಿ ಪೂರ್ವ’ ಸಿನಿಮಾದ ಕಥಾಹಂದರ ಸಾಗುತ್ತದೆ. ಇಡೀ ಸಿನಿಮಾ ಬಹುತೇಕ ಎಲ್ಲರ ಕಾಲೇಜು ದಿನಗಳನ್ನು ನೆನಪಿಸುವಂತಿದೆ ಎಂಬುದು ಚಿತ್ರದ ಬಗ್ಗೆ ಚಿತ್ರತಂಡದ ವಿಶ್ವಾಸದ ಮಾತು.
‘ಪದವಿ ಪೂರ್ವ’ ಸಿನಿಮಾದಲ್ಲಿ ಪೃಥ್ವಿ ಅವರಿಗೆ ಅಂಜಲಿ ಅನೀಶ್, ಯಶಾ ಶಿವಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಹರಿಪ್ರಸಾದ್ ನಿರ್ದೇಶನದ ‘ಪದವಿ ಪೂರ್ವ’ ಸಿನಿಮಾ ಇದೇ ಡಿಸೆಂಬರ್ 30ಕ್ಕೆ ತೆರೆ ಕಾಣುತ್ತಿದೆ.
SHOCKING NEWS : ಶಸ್ತ್ರಚಿಕಿತ್ಸೆಗಾಗಿ ಕುತ್ತಿಗೆಗೆ ಚುಚ್ಚಿದ ಶ್ರಿಶೂಲದೊಂದಿಗೆ 65 ಕಿಮೀ ಪ್ರಯಾಣಿಸಿದ ವ್ಯಕ್ತಿ!
BREAKING NEWS : ಕರ್ನಾಟಕದ ಬಸ್ ಗಳ ಮೇಲೆ ಮಸಿ ಬಳಿದ ಮಹಾಪುಂಡರು : ಬೆಳಗಾವಿಯಲ್ಲಿ ಭುಗಿಲೆದ್ದ ‘ಕರವೇ’ ಆಕ್ರೋಶ
.