ತುಮಕೂರು: ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿ ಅಲ್ಲ. ಇವ್ರ ಅನ್ನ ಭಾಗ್ಯ ಅಕ್ಕಿಗೆ ಮೋದಿ ಅಕ್ಕಿ ಅಂತ ಹೆಸರು ಇಡುವಂತಹ ಕೆಲಸಕ್ಕೆ ಬೊಮ್ಮಾಯಿ ಅವ್ರು ಹೋಗಿಲ್ಲ. ಬೊಮ್ಮಾಯಿ ಅವರು ಮಾಡಿರುವ ಕೆಲಸ ರೈತರ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆ, ಮನೆ ಮನೆಗೆ ಟ್ರ್ಯಾಪ್ ವಾಟರ್ ಕೊಡಲಾಗ್ತಿದೆ. 50 ವರ್ಷ ಸರ್ಕಾರ ಆಳಿದ್ರು, ಮನೆ ಮನೆಗೆ ಯಾಕೆ ಇವರ ಕೈಯಲ್ಲಿ ನೀರು ಕೊಡೋಕೆ ಆಗಲಿಲ್ಲ. ಮುಂದಿನ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನ ಘೋಷಣೆ ಮಾಡ್ತಾರೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಭಿವೃದ್ಧಿ ಕಾರ್ಯಗಳನ್ನ ನಮ್ಮ ಸರ್ಕಾರ ಮಾಡಿದೆ. ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಒಂದಿಷ್ಟು ಕಾಳಜಿ ಇಲ್ಲ. ಬರೀ ಟೀಕೆ ಮಾಡೋದು ಒಂದೇ..!! ಟೀಕೆ ಮಾಡೋದನ್ನ ಸಹ ನ್ಯಾಯವಾಗಿ ಮಾಡ್ಬೇಕು. ಸಿದ್ದರಾಮಯ್ಯ ಒಂದು ಕಡೆ, ಡಿಕೆ ಶಿವಕುಮಾರ್ ಒಂದು ಕಡೆ ವಿರುದ್ಧವಾಗಿ ಟೀಕೆ ಮಾಡ್ತಾರೆ. ಎಸ್ ಟಿಗೆ ಮೀಸಲಾತಿ ಮಾಡಿರೋದು ಕಾಂಗ್ರೆಸ್ ಗೆ ಬಹಳ ಸಮಸ್ಯೆ ಆಗಿದೆ. ಕೇಂಪೆಗೌಡ ಟ್ಯಾಚು ಮಾಡಿದ್ಮೇಲೆಂತು ಇನ್ನು ಹೊಟ್ಟೆ ಊರಿ ಶುರುವಾಗಿದೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಬರಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ ಎಂದರು.
ಗುಜರಾತ್ ಎಲೆಕ್ಷನ್ ಆದ್ಮೇಲೆ ಕರ್ನಾಟಕದಲ್ಲಿ ಗಂಟು ಮೂಟೆ ಕಟ್ಕಂಡು ಹೋಗೋ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ. ಟಿಪ್ಪು ಭಾಗ್ಯ ಕೊಟ್ಟಿದ್ದಾರೆ, ಟಿಪ್ಪು ಜಂಯತಿ ಮಾಡಿದ್ದಾರೆ. ಟಿಪ್ಪು ಜಂಯತಿ ಆದಾಗ ಕೊಲೆಯಾಯ್ತು, ಇದು ಅವರ ಭಾಗ್ಯ. ಪಿಎಫ್ಐ ಅಪರಾಧಿಗಳಿದ್ರು ಮತ್ತೆ ಅವರನ್ನೆಲ್ಲಾ ಬೀದಿಗೆ ಬಿಟ್ರು. ಇವಾಗ ಕೇಂದ್ರ ಸರ್ಕಾರ ಬ್ಯಾನ್ ಮಾಡ್ತು ಅದನ್ನ. ಕಾಂಗ್ರೆಸ್ ಸರ್ಕಾರ ಅವರಿಗೆಲ್ಲ ಲೈಸೆನ್ಸ್ ಕೊಟ್ಟಂಗೆ ಗಲಾಟೆ ಮಾಡ್ಲಿ ಅಂತ ಬಿಡಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಎಲ್ಲರ ಪರವಾಗಿಲ್ಲ. ಅಲ್ಪಸಂಖ್ಯಾತರರನ್ನ ಕಂಡ್ರೆ ಅದೇನ್ ಓಲೈಕೆ ಗೊತ್ತಿಲ್ಲ. ಟಿಪ್ಪು ಅಂದ್ರೆ ಸಿದ್ದರಾಮಯ್ಯ ಪ್ರಾಣ ಬಿಡ್ತಾರೆ. ಟಿಪ್ಪುಗಾಗಿ ಪ್ರಾಣ ಬಿಡೋ ಕಾಂಗ್ರೆಸ್ ಏನಿದೆ ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ ಅಂತ. ಜನ ಈಗಾಗಲೇ ತಿರ್ಮಾನ ಮಾಡಿದ್ದಾರೆ. ಗುಜರಾತ್ ನಲ್ಲಿ ವಿರೋಧ ಆಗೋಕೆ ಯೋಗ್ಯತೆ ಇಲ್ಲದ ಹಾಗೇ ಕರ್ನಾಟಕದಲ್ಲಿ ಕಾಂಗ್ರೆಸ್ ಬರುತ್ತೆ ಎಂದರು.
ಅಮ್ಮ್ ಆದ್ಮಿ ಪಾರ್ಟಿ, ಸರ್ಪ್ ಹಾಕೊಂಡು ನಿರ್ಮಾ ನಿರ್ಮಾ ಅಂನ್ಕೊಂಡು ಈಗಾಗಲೇ ಕಾಂಗ್ರೆಸ್ ನ ತೊಳೆದಿದೆ. ಕರ್ನಾಟಕದಲ್ಲಿಯೂ ಸಹ ಅದೇ ರೀತಿ ಅಹ್ಮ ಆದ್ಮಿ ಪಾರ್ಟಿ ಕಾಂಗ್ರೆಸ್ ನ ತೊಳೆಯುತ್ತೆ. ಗುಜರಾತ್ ಮಾಡೆಲ್ ಗುಜರಾತ್ ನಲ್ಲೇ, ಕರ್ನಾಟಕ ಮಾಡೆಲ್ ಕರ್ನಾಟಕ ಮಾಡೆಲೇ. ಕೇಂದ್ರದ ತಂಡ ಕರ್ನಾಟಕಕ್ಕೆ ಬರುತ್ತೆ. ಇದೇ ಡಿಸೆಂಬರ್ ನಲ್ಲಿ ಕೇಂದ್ರದ ನಾಯಕರೆಲ್ಲಾ ಬರುತ್ತಾರೆ. ಮೋದಿಯವರು ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರ್ತಾರೆ. ಅಮಿತ್ ಷಾ ಪ್ರತಿ ತಿಂಗಳು ನಾಲ್ಕು ಬಾರಿ ಬರ್ತಾರೆ. ಇಲ್ಲಿನ ಮಾನದಂಡಗಳು ಏನಿದೆ, ಏನ್ ಮಾಡ್ಬೇಕು ಅನ್ನೋದನ್ನ ಮೋದಿ, ಅಮಿತ್ ಷಾ ತಿರ್ಮಾನ ಮಾಡ್ತಾರೆ. ಆ ಪ್ರಕಾರ ಚುನಾವಣೆ ಗೆಲ್ಲೋಕೆ ತಯಾರಿ ಮಾಡ್ತಿವಿ ಎಂದು ಹೇಳಿದರು.
ಈಶ್ವರಪ್ಪಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಮಾತನಾಡಿ, ಈಗಾಗಲೇ ಪೊಲೀಸ್ ತನಿಖೆ ಆಗಿದೆ. ಬಿ ರಿಪೋರ್ಟ್ ಕೂಡಾ ಹಾಕಿದ್ದಾರೆ. ಕಾಂಗ್ರೆಸ್ ಅವ್ರು ಮಾಡೋ ಅಪಾದನೆಗಳಿಗೆಲ್ಲಾ ಬೆಲೆ ಕೊಡುವಂತಹ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೆಲ್ಲಾ ಆಗಿದೆ ರಾಜ್ಯ ಹಾಗೂ ಇಡೀ ದೇಶದ ಜನತೆಗೆ ಗೊತ್ತಿದೆ. ಅದೆಲ್ಲಾ ಮುಗಿದ ಅಧ್ಯಾಯ. ಟಿಕೆಟ್ ಬಗ್ಗೆ ಪಾರ್ಟಿ ಹೈ ಕಂಮಾಂಡ್ ಪರಿಶೀಲನೆ ಮಾಡಿ ತಿರ್ಮಾನ ಮಾಡ್ತಾರೆ. ನಾವು ಟಿಕೆಟ್ ಕೊಡುವಂತಹ ಮಟ್ಟಕ್ಕೆ ಇನ್ನು ಬಂದಿಲ್ಲ. ಈಗ ಗೆಲ್ಲಿಸೋ ಮಟ್ಟಕ್ಕೆ ಬಂದಿದಿವಿ ಎಂದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಮಾತನಾಡಿ, ಶ್ರೀರಾಮುಲು, ನಾನು, ಮುಖ್ಯಮಂತ್ರಿಗಳು ಎಲ್ಲಾರು ಸೇರಿ ಜನಾರ್ದನ ರೆಡ್ಡಿ ಜೊತೆ
ಮಾತಾಡಿದ್ದಿವಿ. ಅವರು ಯಾವುದೇ ಕಾರಣಕ್ಕೂ ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಅವೆಲ್ಲಾ ಶುದ್ದ ಸುಳ್ಳು, ಹಿಂದೇನು ಬಿಜೆಪಿಗೆ ಬೆಂಬಲ ಮಾಡಿದ್ದಾರೆ. ಮುಂದೇಯು ಸಹ ಬಿಜೆಪಿ ಬೆಂಬಲ ನೀಡ್ತಾರೆ. ಹೈಕಮಾಂಡ್ ತಿರ್ಮಾನ ಮಾಡುತ್ತೆ. ಆ ಸಂದರ್ಭವನ್ನ ಯೋಜನೆ ಮಾಡಿ ನಿರ್ಧಾರ ಮಾಡ್ತಿವಿ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಒದ್ದಾಡಿಕೊಂಡು ಡಿಕೆ ಶಿವಕುಮಾರ್ ನಡೆಸ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಅವರದು ಒದ್ದಾಟ ಅಲ್ಲ ಪರದಾಟ. ಒಂದು ಕಡೆ ದಲಿತ ಮುಖ್ಯಮಂತ್ರಿ ಪರಮೇಶ್ವರ್ ತಂಡ. ಇನ್ನೊಂದು ಕಡೆ ಕಾಲು ಎಳೆಯೋಕೆ ಸಿದ್ದರಾಮಯ್ಯ. ಇದರಲ್ಲಿ ಬಹಳ ತೊಂದರೆಗೆ ಸಿಕ್ಕಿರೊದು ಡಿಕೆ ಶಿವಕುಮಾರ್. ಏನೋ ಮಾಡೋಕೆ ಹೋಗಿ ಏನೋ ಮಾಡಿದ್ರು ಹಾಗಾಗಿದೆ ಅಂತ ಸ್ಥಿತಿ ಡಿಕೆ ಶಿವಕುಮಾರ್ ಗೆ ಬಂದು ತಲುಪಿದೆ. ಡಿಕೆ ಶಿವಕುಮಾರ್ ಪಾಡು ಒಂದು ರೀತಿ ನಗೇ ಪಾಟಲಿಗೆ ಈಡಾಗುವ ಸ್ಥಿತಿಗೆ ತಲುಪಿದ್ದಾರೆ. ಪರಮೇಶ್ವರ್ ಹೇಳಿರೋದು ಸತ್ಯ. ಹಿಂದೆ ಪರಮೇಶ್ವರ್ ಸೋಲಿಸಿದವರು ಯಾರು ಅಂತ ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಮತ್ತು ಅವರ ತಂಡ. ಪರಮೇಶ್ವರ್ ಮುಖ್ಯಮಂತ್ರಿ ಯಾಗ್ತಾರೆ ಅಂತ ಸೋಲಿಸಿದ್ರು. ಈಗ ಕಾಂಗ್ರೆಸ್ ಸೋಲಿಸೋಕೆ ಬಿಜೆಪಿ ಬೇಡ. ಎರಡೇ ಎರಡು ಬಾಣ ಸಾಕು. ಒಂದು ಕಾಂಗ್ರೆಸ್ ಅವ್ರನ್ನ ಕಾಂಗ್ರೆಸ್ ಅವ್ರೆ ಸೋಲಿಸ್ತಾರೆ ಎಂದರು.
ಸಿದ್ದರಾಮಯ್ಯಗೆ ಎಲ್ಲು ನಿಲ್ಲೋಕೆ ಕರ್ನಾಟಕದಲ್ಲಿ ಜಾಗನೇ ಇಲ್ಲ. ಕೋಲಾರಕ್ಕೆ ಹೋದ್ರು, ಮೈಸೂರಿಗೆ ಬಂದ್ರು. ಉತ್ತರ ಕರ್ನಾಟಕಕ್ಕೆ ಹೋದ್ರು.
ಇವತ್ತು ಎಲ್ಲೂ ಇಲ್ದೆ ಅಲಿತಿದ್ದಾರೆ. ಅವರಿಗೆ ಬಿಜೆಪಿ ಭಯಯಲ್ಲ, ಕಾಂಗ್ರೆಸ್ ಅವ್ರೆ ನನ್ನ ಸೋಲಿಸ್ತಾರೆ ಅಂತ ಭಯ. ಯಾಕಂದ್ರೆ ನಾನು ಪರಮೇಶ್ವರ್ ನ ಸೋಲಿಸಿದ್ದೆ. ಈಗ ಪರಮೇಶ್ವರ್ ಟೀಂ ನನ್ನ ಸೋಲಿಸ್ತಾರೆ. ಆ ಭಯಕ್ಕೆ ಅವ್ರು ಕ್ಷೇತ್ರ ಹುಡುಕಾಟ ನಡೆಸ್ತಿದ್ದಾರೆ. ಅದರಲ್ಲಿ ಡಿಕೆ ಶಿವಕುಮಾರ್ ಬೇರೆ ಹೊಸ ಗಾಳ ಹಾಕ್ತಿದ್ದಾರೆ. ಸಿದ್ದರಾಮಯ್ಯ ಸೋತ್ರೆ ನಾನು ಸಿಎಂ ಆಗ್ಬಹುದು ಅಂತ ಡಿಕೆ ಶಿವಕುಮಾರ್ ಗೆ ಕನಸು ಎಂದರು.
ಜನಸಂಕಲ್ಪ ಯಾತ್ರೆಗೆ ಯಡಿಯೂರಪ್ಪ ಗೈರು ವಿಚಾರವಾಗಿ ಮಾತನಾಡಿ, ಎಲ್ಲಾ ಕಡೆ ಯಡಿಯೂರಪ್ಪ ಜನ ಸಂಕಲ್ಪ ಯಾತ್ರೆ ಮಾಡ್ತಿದ್ದಾರೆ. ಎರಡ್ಮೂರು ಟೀಂ ಮಾಡಿದಿವಿ, ಯಡಿಯೂರಪ್ಪ ಇವಾಗ ಗುಜರಾತ್ ಗೆ ಹೋಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯನ್ನ ಆಯ್ಕೆ ಮಾಡುವ ಜವಾಬ್ದಾರಿಯನ್ನ ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ. ಸಮಯ ಸಿಕ್ಕಾಗ ಬರ್ತಾರೆ. ಯಡಿಯೂರಪ್ಪ ನಮ್ಮ ಪ್ರಶ್ನಾತಿತ ನಾಯಕರು. ಅವರ ನೇತೃತ್ವದಲ್ಲೇ ನಾವು ಚುನಾವಣೆ ಮಾಡ್ತಿವಿ ಎಂದು ತಿಳಿಸಿದರು.
ದಲಿತ ಸಿಎಂ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಆವತ್ತು ತಿರ್ಮಾನ ಮಾಡ್ತಿವಿ. ಸೆಲೆಕ್ಷನ್ ಆದ ಶಾಸಕರು ಹಾಗೂ ನಮ್ಮ ಹೈಕಂಮಡ್ ಟೀಂ ಇರುತ್ತೆ. ಮೋದಿಜಿ ಇದ್ದಾರೆ ಅವರು ತಿರ್ಮಾನ ಮಾಡಿ ಆಯ್ಕೆ ಮಾಡ್ತಾರೆ. ಇಂತಹದ್ದೇ ಬ್ರಾಂಡ್ ಅಂತ ಮಾಡೋಕೆ ಆಗಲ್ಲ. ಕರ್ನಾಟಕದಲ್ಲಿ ಎಲ್ಲಾ ಜಾತಿ ಸಮುದಾಯದವನ್ನ ಒಟ್ಟಿಗೆ ತೆಗೆದುಕೊಂಡು ಹೊಗೋ ಜವಾಬ್ದಾರಿ. ಬಿಜೆಪಿ ಧರ್ಮ ಪಾಲನೆಯನ್ನ ನಾವು ಮಾಡ್ತಿವಿ. ಯಾರು ದಲಿತ ಸಿಎಂ ಆಗ್ಬೇಕು ಅಂತ ಬೇಡಿಕೆ ಇಟ್ಟಿಲ್ಲ ಎಂದರು.