ಚಿಕ್ಕಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಡಾ.ಕೆ ಸುಧಾಕರ ಗೆದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಯ ವಿಚಾರವಾಗಿ ಇದೀಗ ಏಕೆ ಪ್ರದೀಪ ಈಶ್ವರ ರಾಜೀನಾಮೆ ಕೊಡಿಸಿಲ್ಲ ಎಂದು ವ್ಯಕ್ತಿಯ ಮೇಲೆ ಡಾ.ಸುಧಾಕರ್ ಬೆಂಬಲಿಗರಿಬ್ಬರೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಹೌದು ನೂತನ ಸಂಸದ ಡಾ. ಸುಧಾಕರ್ ಬೆಂಬಲಿಗರ ವಿರುದ್ಧ ಇದೀಗ ಹಲ್ಲೆ ಆರೋಪ ಕೇಳಿ ಬಂದಿದ್ದು, ಬಿಯರ್ ಬಾಟಲ್ ನಿಂದ ತಿವಿದು ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಘಟನೆಯು ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಗೋಪಾಲ ಎಂಬುವರ ಮೇಲೆ ಚಂದ್ರಪ್ಪ ಮತ್ತು ಅರ್ಜುನ್ ಹಲ್ಲೆ ನಡೆಸಿದ್ದಾರೆ. ಪ್ರದೀಪ್ ಈಶ್ವರ್ ಕರೆಸುವಂತೆ ದಮ್ಕಿ ಹಾಕಿದ ಆರೋಪ ಕೂಡ ಕೇಳಿ ಬಂದಿದೆ. ಸಂಸದ ಡಾ. ಸುಧಾಕರ್ ಬೆಂಬಲಿಗರ ವಿರುದ್ಧ ಇದೀಗ ಹಲ್ಲೆ ಆರೋಪ ಕೇಳಿ ಬಂದಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೆಕ್ಷನ್ 324, 504, 506 34ರ ಅಡಿ ಪ್ರಕರಣ ದಾಖಲಾಗಿದೆ.