ಭೋಪಾಲ್: ಮಧ್ಯಪ್ರದೇಶ ನಗರದಲ್ಲಿ ಶುಕ್ರವಾರ ರಾತ್ರಿ ಹಳೇ ವಿವಾದದ ಹಿನ್ನೆಲೆಯಲ್ಲಿ ಬಲಪಂಥೀಯ ಗುಂಪಿನ ಕರ್ಣಿ ಸೇನೆಯ 28 ವರ್ಷದ ಸದಸ್ಯನನ್ನು ಸಾರ್ವಜನಿಕವಾಗಿ ಇರಿದು ಹತ್ಯೆ ಮಾಡಲಾಗಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇಟಾರ್ಸಿಯ ಕರ್ಣಿ ಸೇನೆಯ ಪಟ್ಟಣ ಕಾರ್ಯದರ್ಶಿ ರೋಹಿತ್ ಸಿಂಗ್ ರಜಪೂತ್ ಅವರನ್ನು ಪುರಸಭೆ ಕಚೇರಿ ಎದುರು ಮೂವರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಆತನನ್ನು ರಕ್ಷಿಸಲು ಮುಂದಾದಾಗ ಆತನ ಸ್ನೇಹಿತ ಸಚಿನ್ ಪಟೇಲ್ ಕೂಡ ಇರಿದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ರಜಪೂತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ, ಪಟೇಲ್ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
A 28-year-old member Karni Sena was publicly stabbed to death on Friday night in Itarsi allegedly over an old dispute. His friend, Sachin Patel, was also stabbed when he tried to save him. @ndtv @ndtvindia pic.twitter.com/MR0PYkI5ss
— Anurag Dwary (@Anurag_Dwary) September 4, 2022
ಹಳೆಯ ವಿವಾದದ ದ್ವೇಷದ ಹಿನ್ನೆಲೆಯಲ್ಲಿ ರೋಹಿತ್ ಸಿಂಗ್ ರಜಪೂತ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಟಾರ್ಸಿ ಪೊಲೀಸ್ ಠಾಣೆಯ ಪ್ರಭಾರಿ ಆರ್ ಎಸ್ ಚೌಹಾಣ್ ಹೇಳಿದ್ದಾರೆ.
ಇದೀಗ ಮೂವರು ಆರೋಪಿಗಳಾದ ರಾಹುಲ್ ರಜಪೂತ್, ಅಂಕಿತ್ ಭಟ್ ಮತ್ತು ಇಶು ಮಾಳವಿಯಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
BIGG NEWS: ಗಣೇಶ ವಿಸರ್ಜನೆಗೆ ಸಿಲಿಕಾನ್ ಸಿಟಿಯಲ್ಲಿ ಹೈಅಲರ್ಟ್ : ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ