ಧಾರವಾಡ : 2014-15 ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಳ್ಳಲಾದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 18 ಗಣತಿ ಚಾರ್ಜ್ ಅಧಿಕಾರಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ರಾಜ್ಯ ಕಾರ್ಯದರ್ಶಿ (ಆಡಳಿತ) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ಅವರು ಬಾಕಿ ಉಳಿದ ಗೌರವಧನವನ್ನು ಬಿಡುಗಡೆ ಮಾಡಿರುತ್ತಾರೆ.
ಕಾರಣ ಸಂಬಂಧಿಸಿದ ಗಣತಿದಾರರು ಹಾಗೂ ಮೇಲ್ವಿಚಾರಕರು ತಮ್ಮ ವಿವರಗಳೊಂದಿಗೆ ಮಾರ್ಚ್ 25, 2025 ರೊಳಗಾಗಿ ಆಯಾ ಸಂಬಂಧಿಸಿದ ಗಣತಿ ಚಾರ್ಜ ಅಧಿಕಾರಿಗಳ ಕಚೇರಿಗಳಿಗೆ ಖುದ್ದಾಗಿ ಭೇಟಿಯಾಗಿ, ಗೌರವಧನವನ್ನು ಪಡೆಯಲು ಸೂಚಿಸಲಾಗಿದೆ. ತಪ್ಪಿದಲ್ಲಿ ಹಾಗೂ ಮಾಹಿತಿ ಲಭ್ಯವಾಗದ ಗಣತಿದಾರರ, ಮೇಲ್ವಿಚಾರಕರ ಗೌರವಧನವನ್ನು ರಾಜ್ಯ ಕಾರ್ಯದರ್ಶಿ (ಆಡಳಿತ) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ಅವರಿಗೆ ಬಾಕಿ ಉಳಿದ ಗೌರವಧನವನ್ನು ಮರಳಿ ಕಳುಹಿಸಿಲಾಗುವುದು. ಸದರಿ ಹಣವನ್ನು ಸರ್ಕಾರಕ್ಕೆ ಮರಳಿಸಿದ ನಂತರ ತಮ್ಮ ಸಂಭಾವನೆ ಮೊತ್ತ ನೀಡಲು ಅವಕಾಶವಿರುವುದಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಧಾನ ಜನಗಣತಿ ಅಧಿಕಾರಿಗಳು ಹಾಗೂ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಔತಣ ಕೂಟಕ್ಕೆ ಆಗಮಿಸಿದ ಇಬ್ಬರು ಬಿಜೆಪಿ ಶಾಸಕರು
ರಾಜ್ಯದ ‘ಪತ್ರಕರ್ತ’ರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ನಿವೇಶನ, ಮನೆ ಹಂಚಿಕೆ’ಯಲ್ಲಿ ಮೀಸಲು