ಕೆಎನ್ಎನ್ ಡಿಜಿಟಲ್ ಡೆಸ್ಕ್: ಸತ್ತ ಪ್ರಾಣಿ, ಪಕ್ಷಿಗಳು ಸೇರಿದಂತೆ ಕೀಟಗಳು ಓಡಾಡೋದು ಇರಲಿ, ಅಲುಗಾಡೋದು ಇಲ್ಲ. ಆದ್ರೇ ಇಲ್ಲೊಂದು ವಿಚಿತ್ರ ಎನ್ನುವಂತೆ ಕೀಟವೊಂದು ಸತ್ತನಂತ್ರವೂ ಓಡಾಡುತ್ತಿದೆ. ಅದೇಗೆ ಎನ್ನುವ ಬಗ್ಗೆ ಅಚ್ಚರಿಯ ಸುದ್ದಿ ಮುಂದೆ ಓದಿ.
ಅಚ್ಚರಿಯಾದರೂ ನಿಜ ಎನ್ನುವಂತೆ ಟ್ವಿಟ್ಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಡಾ.ಸಾಮ್ರಾಟ್ ಗೌಡ ಎಂಬುವರು ಅಸ್ಥಿ ಪಂಜರದಂತೆ ಕಾಣುವಂತ ಕೀಟವೊಂದು ಓಡಾಡುವಂತ ವೀಡಿಯೋವನ್ನು ಶೇರ್ ಮಾಡಿದ್ದಾರೆ.
BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ ; ‘ದಾದಾ’ ಹೇಳಿದ್ದೇನು ಗೊತ್ತಾ?
ಸತ್ತಂತೆ ಇರುವಂತ ಕೀಟವೊಂದು ಓಡಾಡುವುದನ್ನು ಕಂಡಂತ ನೆಟ್ಟಿಗರು ಓ ಮೈ ಗಾಡ್ ಎನ್ನುವಂತೆ ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ 200ಕ್ಕೂ ಹೆಚ್ಚು ಮಂದಿ ಆ ವೀಡಿಯೋ ಶೇರ್ ಮಾಡಿದ್ದರೇ, 1 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ ನೀಡಿದ್ದಾರೆ.
ಇನ್ನೂ ಕೆಲವರಂತೂ ಹೀಗೆ ಅಸ್ಥಿಪಂಜರದಂತೆ ಓಡಾಡುವಂತ ಕೀಟದ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಹಂಚಿಕೊಂಡು, ಇದೇನೂ ಹೊಸದೇನಲ್ಲ ಎಂಬುದಾಗಿ ಹೇಳಿದ್ದಾರೆ.
ಬೆಂಗಳೂರಿನ ಜನತೆ ಗಮನಕ್ಕೆ: ಬಿಬಿಎಂಪಿಯಿಂದ ಕಲ್ಯಾಣ ಕಾರ್ಯಕ್ರಮಗಳಡಿ ಅರ್ಜಿಸಲ್ಲಿಕೆ ದಿನಾಂಕ ವಿಸ್ತರಣೆ
ಅಂದಹಾಗೇ ಐಎಫ್ಎಸ್ ಅಧಿಕಾರಿ ಡಾ.ಸಾಮ್ರಾಟ್ ಗೌಡ ಎನ್ನುವವರು ಮಾಡಿರುವಂತ ಟ್ವಿಟ್ ನಲ್ಲಿ ಮಾಹಿತಿ ಕೂಡ ಕೀಟದ ಬಗ್ಗೆ ಶೇರ್ ಮಾಡಿದ್ದಾರೆ. ನಿನಗೆ ಗೊತ್ತೆ? ವಿಜ್ಞಾನಿಗಳ ಪ್ರಕಾರ ನರ ಪರಾವಲಂಬಿಯೊಂದು ಈ ಸತ್ತ ಕೀಟದ ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿ ಅದನ್ನು ನಡೆಯುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
Do you know? according to scientists A neuro parasite has taken control of brain of this dead insect and making it walk…….. Zombie ☠️💀💀 pic.twitter.com/WBS8hNvH91
— Dr.Samrat Gowda IFS (@IfsSamrat) October 18, 2022
ಈ ವೀಡಿಯೋಗೆ ಮತ್ತೊಬ್ಬ ನೆಟ್ಟಿಗ, ಇದು ಕಾರ್ಡಿಸೆಪ್ಸ್ ಶಿಲೀಂಧ್ರದಿಂದ ‘ಸೋಂಕಿತ’ ಜೀರುಂಡೆ ಎಂಬ ಕಾಕ್ ಚಾಫರ್ ಆಗಿದೆ. ಅವು ಆತಿಥೇಯನ ಚಲನವಲನಗಳ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳುತ್ತವೆ. ಕೀಟದ ದೇಹದ ಮೂಲಕ ಬೆಳೆಯುತ್ತವೆ. ಕೀಟದ ಸ್ನಾಯುಗಳನ್ನು ನಿಯಂತ್ರಿಸುವ ತಂತುಗಳ ಜಾಲವನ್ನು ಸೃಷ್ಟಿಸುತ್ತವೆ ಎಂದಿದ್ದಾರೆ.
This is a cockchafer Beetle 'infected' with a Cordyceps fungi. They take control of the host's movements, grows through an insect's body, creating a network of filaments that commandeers the insect's muscles
— Sid 🇮🇳 (@sidduu96) October 18, 2022