ನವದೆಹಲಿ : ದೇಶಾದ್ಯಂತ ಏಕಕಾಲದಲ್ಲಿ ಎನ್ ಐ ಎ ದಾಳಿ ನಡೆಸಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಿರುದ್ಧದ ಪ್ರಮುಖ ಕಾರ್ಯಚರಣೆಯಲ್ಲಿ ದೇಶಾದ್ಯಂತ 97 ಕಡೆ ದಾಳಿ ನಡೆಸಿದ್ದೇವೆ ಎಂದು ಎನ್ ಐ ಎ ಮಾಹಿತಿ ನೀಡಿದೆ. ಇಂದು ಪಿಎಫ್ಐಗೆ ಸೇರಿದ 25 ಸ್ಥಳಗಳು ಸೇರಿ 97 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ದಾಖಲೆ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಹಾಗೂ ಈ ಸಂಬಂಧ 45 ಮಂದಿಯನ್ನು ಬಂಧಿಸಲಾಗಿದೆ.
ಇನ್ನೂ, ಕರ್ನಾಟಕದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅನೀಸ್ ಅಹಮದ್,. ಶಾಹಿದ್ ನಾಸೀರ್, ಫಾರೂಕ್ ರೆಹಮಾನ್, ಯಾಸಿರ್ ಅರಾಫತ್, ಅಬ್ದುಲ್ ವಾಹಿದ್ ಸೇಠ್, ಶಾಕೀಬ್, ಅಫ್ಸರ್ ಪಾಷಾ ನನ್ನು ಬಂಧಿಸಲಾಗಿದೆ.
ತಮಿಳುನಾಡಿನಲ್ಲಿ 11, ಆಂದ್ರ ಪ್ರದೇಶದಲ್ಲಿ 4, ಕೇರಳದಲ್ಲಿ 19, ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಿರುದ್ಧದ ಪ್ರಮುಖ ಕಾರ್ಯಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಹಲವು ಸ್ಥಳಗಳಲ್ಲಿ ಶೋಧ ನಡೆಸಿತು. 106 ಕ್ಕೂ ಹೆಚ್ಚು PFI ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಜನರನ್ನು ವಿವಿಧ ಪ್ರಕರಣಗಳಲ್ಲಿ ED, NIA ಮತ್ತು ರಾಜ್ಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ‘105 ಸರ್ಕಾರಿ ಶಾಲೆ’ಗಳ ಸಮಗ್ರ ಅಭಿವೃದ್ಧಿಗೆ ‘ಶಾಲಾ ಶಿಕ್ಷಣ ಇಲಾಖೆ’ಯೊಂದಿಗೆ ‘ಸತ್ವ ಕಂಪನಿ’ ಒಡಂಬಡಿಕೆ
Watch : ಮಳೆಯಿಂದ ದೆಹಲಿ-ಗುರುಗ್ರಾಮ್ ಎಕ್ಸ್ಪ್ರೆಸ್ ವೇ ಜಲಾವೃತ : ವಾಹನ ದಟ್ಟಣೆ, ಜನರು ಪರದಾಟ