ಬೆಂಗಳೂರು : ರಾಜ್ಯವು ಹಲವು ವರ್ಷಗಳ ನಂತರ ಹೀಟ್ ವೇವ್ ಬಿಸಿ ಅನುಭವಿಸುತ್ತಿದೆ. ಇದರ ಪರಿಣಾಮ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯ ನೀರಿನ ಸಮಸ್ಯೆ ಎದುರಿಸ ಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ಅಲ್ಲದೆ ಪರಿಹಾರ ನೀಡಲು ಶಾಸಕರ ಅಧ್ಯ ಕತೆಯ ಟಾಸ್ಟ್ ಫೋರ್ಸ್ ಕೆಲಸ ಎಂದು ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳ ನಂತರ ಹೀಟ್ ವೇವ್‌ನ ಅನುಭವ ಆಗುತ್ತಿದೆ. ಇದರಿಂದ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಎಸ್ ಒಪಿ ಪ್ರಕಟಿಸಲಾಗಿದೆ. ಅದರ ಜತೆಗೆ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಈಗಾಗಲೇ ಸಭೆ ನಡೆಸಿದ್ದಾರೆ. ನೀರಿನ ಸಮಸ್ಯೆ ಎದುರಾಗದಂತೆ ಏನೆಲ್ಲ ಕ್ರಮ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚನೆ ನೀಡಿದ್ದಾರೆ ಎಂದರು.
ಹವಾಮಾನ ಏರುಪೇರಿನಿಂದ ಸಮಸ್ಯೆ ಎದುರಾಗು ತ್ತದೆ. ಸಮಸ್ಯೆ ಎದುರಿಸಲು ಹಣದ ಕೊರತೆಯಿಲ್ಲ. ಆದರೆ, ಕೊಳವೆಬಾವಿ ಕೊರೆದರೂ ನೀರು ಬರಬೇಕಲ್ಲ. ಪ್ರಕೃತಿಯ ನಿಯಮವಿದು. ಖಾಸಗಿ ಬೋರ್‌ವೆಲ್ ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಟಾಸ್ಕ್ ಪೋರ್ಸ್ ರಚನೆಯಾಗಿದ್ದು, ಪ್ರತಿ ಟಾಸ್ಕ್‌ಫೋರ್ಸ್ ಗೂ ಶಾಸಕರು ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.








