ಶಿವಮೊಗ್ಗ: ಸಾಗರ ತಾಲ್ಲೂಕು ಖಾಸಗಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆರ್. ಶ್ರೀನಿವಾಸ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಸಾಗರದಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.
ಹೀಗಿದೆ ನೂತನ ಪದಾಧಿಕಾರಿಗಳ ವಿವರ:
ಸಂಘದ ಬಲವರ್ಧನೆಗಾಗಿ ವಿವಿಧ ಜವಾಬ್ದಾರಿಗಳಿಗೆ ಕೆಳಗಿನವರನ್ನು ನೇಮಿಸಲಾಗಿದೆ:
-
ಗೌರವಾಧ್ಯಕ್ಷರು: ರಾಬರ್ಟ್ ಗೋಮ್ಸ್
-
ಉಪಾಧ್ಯಕ್ಷರು: ಮುರುಗನ್, ಚಂದ್ರು ಮೇಸ್ತ್ರಿ, ಎಲ್.ಆರ್.ಎಸ್. ರಾಜಣ್ಣ, ವೆಂಕಟೇಶ್ ವಿ., ಖಲಬ್ ಸಾಬ್, ವಾಸು ಮೇಸ್ತ್ರಿ, ಮನೋಜ್.
-
ಪ್ರಧಾನ ಕಾರ್ಯದರ್ಶಿಗಳು: ಶ್ರೀನಾಥ್, ಸಬಾಸ್ಟಿನ್.
-
ಖಜಾಂಚಿ: ಯೋಗೇಂದ್ರ.
-
ಸಂಘಟನಾ ಕಾರ್ಯದರ್ಶಿ: ಅಂತೋನಿ ಗೋಮ್ಸ್.
-
ಸಹ ಕಾರ್ಯದರ್ಶಿಗಳು: ಅರುಣ್, ಶಂಕರ್ ಪೂಜಾರಿ, ಗುರುರಾಜ, ನಾಗರಾಜ್, ಮರಿದೇವ, ಶಿವರಾಮ ಜಂಬಗಾರು.
-
ಸಂಚಾಲಕರು: ಸಂತೋಷ್, ಸುಂದರ, ಬೀರಪ್ಪ, ಮಣಿ.
ಕಾರ್ಮಿಕರ ಹಿತರಕ್ಷಣೆಗೆ ಸಂಘ ಬದ್ಧ: ಆರ್. ಶ್ರೀನಿವಾಸ್
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಆರ್. ಶ್ರೀನಿವಾಸ್ ಮೇಸ್ತ್ರಿ, ತಾಲ್ಲೂಕಿನ ಕಾರ್ಮಿಕರ ಶಕ್ತಿಯ ಬಗ್ಗೆ ಮಾಹಿತಿ ನೀಡಿದರು:
“ಸಾಗರ ತಾಲ್ಲೂಕಿನಲ್ಲಿ ಸುಮಾರು 14,500 ಕಟ್ಟಡ ಕಾರ್ಮಿಕರಿದ್ದು, ನಗರ ವ್ಯಾಪ್ತಿಯಲ್ಲೇ 5 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನಮ್ಮ ಸಂಘದಲ್ಲಿ ಕೇವಲ ಕಟ್ಟಡ ಕಾರ್ಮಿಕರಷ್ಟೇ ಅಲ್ಲದೆ ಫ್ಲಂಬರ್, ಆಚಾರಿಗಳು, ಎಲೆಕ್ಟ್ರೀಷಿಯನ್, ಪೇಂಟರ್ಸ್ ಸೇರಿದಂತೆ ವಿವಿಧ ವೃತ್ತಿಪರರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಮುಂಬರುವ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಸಂಘವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಿ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.”
ಈ ಆಯ್ಕೆಯು ತಾಲ್ಲೂಕಿನ ಕಟ್ಟಡ ಕಾರ್ಮಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸಂಘದ ಬಲವರ್ಧನೆಗೆ ಎಲ್ಲರೂ ಕೈಜೋಡಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ಸಾಗರದಲ್ಲಿ ವಿಜ್ಞಾನ ಕಾಲೇಜಿನಲ್ಲಿ ಖಗೋಳ ಕೌತುಕ ‘ನೆರಳು ರಹಿತ ದಿನ’ ಆಚರಣೆ
ಮಹಿಳಾ ಮೀಸಲಾತಿ ಸಂಘರ್ಷ: ಕಾಂಗ್ರೆಸ್ ವಿರುದ್ಧ ಸಾಗರದಲ್ಲಿ ‘ತಟ್ಟೆ-ಲೋಟ’ ಬಡಿದು ಬಿಜೆಪಿ ನಾರಿಶಕ್ತಿಯ ಆಕ್ರೋಶ








