ಬೆಂಗಳೂರು : 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರವು ತಪ್ಪಾಗಿ ರಚನೆಯಾಗಿದ್ದು, ಶೀಘ್ರದಲ್ಲೇ ಅದು ಪತನವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದರು.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಾಗಿ ಎನ್ಡಿಎ ಸರ್ಕಾರ ರಚನೆಯಾಗಿದೆ. ಮೋದಿಜಿಗೆ ಜನಾದೇಶವಿಲ್ಲ. ಇದು ಅಲ್ಪಸಂಖ್ಯಾತ ಸರ್ಕಾರ. ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಪ್ರಮಾದದಿಂದ ಎನ್ಡಿಎ ಸರಕಾರ ರಚನೆಯಾಗಿದ್ದು, ಅದು ಯಾವಾಗ ಬೇಕಾದರೂ ಪತನವಾಗಬಹುದು ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂಬ ಊಹಾಪೋಹದ ಕೆಲವು ದಿನಗಳ ನಂತರ ಅವರ ಈ ಹೇಳಿಕೆ ಹೊರಬಿದ್ದಿದೆ.ಹಾಗಾಗಿ ನರೇಂದ್ರ ಮೋದಿಯವರ ಬಹುಮತವಿಲ್ಲದ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಖರ್ಗೆ ಭವಿಷ್ಯ ನುಡಿದಿದ್ದಾರೆ.
People have put the BJP in minority govt, Modi used to say that the ‘Khichadi govt’ is weak.
This govt can fall anytime.
— Congress President @kharge Ji pic.twitter.com/a71Nj9f68Q
— Shantanu (@shaandelhite) June 15, 2024