ಬೆಂಗಳೂರು : ನೇರಳೆ ಮಾರ್ಗದ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣದಿಂದ ಜೂನ್ 17ರಂದು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ.
ಬೆಳಗ್ಗೆ 05:00 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ಮಧ್ಯಾಹ್ನ 1ಗಂಟೆಯ ಬಳಿಕ ರೈಲು ಸೇವೆ ಚಲ್ಲಘಟ್ಟ ಟು ವೈಟ್ಫೀಲ್ಡ್ ನಡುವೆ ಸಂಪೂರ್ಣ ಸಂಚಾರ ಲಭ್ಯವಿರಲಿದೆ. ಆದಾಗ್ಯೂ, ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದೆ.