ದಾವಣಗೆರೆ: ಕಳೆದ ಭಾನುವಾರದಿಂದ ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ( Honnalli MLA MP Renukacharya ) ಅವರ ಸಹೋದರನ ಪುತ್ರ ಕಾಣೆಯಾಗಿದ್ದಾರೆ. ಅವರು ಯಾರಿಗಾದರೂ ಸಿಕ್ಕರೇ ಮಾಹಿತಿ ನೀಡುವಂತೆ ಶಾಸಕರು ಕೋರಿದ್ದಾರೆ.
‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್
ಈ ಕುರಿತಂತೆ ಟ್ವಿಟ್ ಮಾಡಿರುವಂತ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ನನ್ನ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊನ್ನಾಳಿಗೆ ಬರುವಾಗ ಕಾಣೆಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ನೆಡೆಸುತ್ತಿದೆ, ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕಾಗಿ ವಿನಂತಿಸುತ್ತಾನೆ. ‘ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ’ ಎಂಬುದಾಗಿ ಮನವಿ ಮಾಡಿದ್ದಾರೆ.
ನನ್ನ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊನ್ನಾಳಿಗೆ ಬರುವಾಗ ಕಾಣೆಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ನೆಡೆಸುತ್ತಿದೆ, ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕಾಗಿ ವಿನಂತಿಸುತ್ತಾನೆ.
'ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ'
Creta car number- KA17 MA 2534 (white car) pic.twitter.com/EsHrJqxTwO
— M P Renukacharya (@MPRBJP) November 2, 2022
ಅಂದಹಾಗೇ ದಿನಾಂಕ 30-10-2022ರಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಎಂ ಪಿ ರಮೇಶ್ ಅವರ ಹಿರಿಯ ಮಗ ಚಂದ್ರಶೇಖರ್ ಸಂಜೆ 7.30ಕ್ಕೆ ಕೆಎ-17, ಎಂಎ 2534 ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ತೆರಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವಂತ ದಾವಣಗೆರೆ ಪೊಲೀಸರು ( Davanagere Police ), ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಇರುವ ಬಗ್ಗೆ ಎಲ್ಲಿಯಾದರೂ ಮಾಹಿತಿ ಇದ್ದರೇ ತಿಳಿಸುವಂತೆ ಶಾಸಕ ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್