ಹಾವೇರಿ: ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅವರನ್ನು ಇದೀಗ ಬಂಧಿಸಲಾಗಿದೆ.
ಹಾವೇರಿ ಜಿಲ್ಲೆಯ ಬಂಕಾಪುರದ ಬಳಿಯ ಹೆದ್ದಾರಿಯಲ್ಲಿ ಇಂದು ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ಘೋರ ದುರಂತ: ಶ್ರೀಕೃಷ್ಣ ಮೂರ್ತಿಯ ನಿಮಜ್ಜನ ವೇಳೆ ಐವರು ಯುವಕರು ನದಿ ಪಾಲು
ಅಂದಹಾಗೇ ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದಂತ ಮುರುಘಾ ಶ್ರೀ ಅಜ್ಞಾತ ಸ್ಥಳಕ್ಕೆ ತೆರಳೋ ಹಿನ್ನಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಖಚಿತ ಮಾಹಿತಿಯನ್ನು ಆಧರಿಸಿ, ಅವರನ್ನು ಬಂಧಿಸಲಾಗಿದೆ.
ಮತ್ತೊಂದೆಡೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಉಮೇಶ್ ಕತ್ತಿ ಅವರು, ಮುರುಘಾ ಶರಣರ ವಿರುದ್ಧ ಎಫ್ಐಆರ್ ಆಗಲ್ಲ. ಎಫ್ಐಆರ್ ಆದ್ರೇ ನೋಡೋಣ. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮಠದ ಒಳ ಜಗಳವಾಗಿದೆ. ಈಗ ಈ ಜಗಳ ಎಲ್ಲೆಲ್ಲೋ ಹೋಗುತ್ತಿದೆ ಅಷ್ಟೇ ಎಂದರು.
ಭಾರೀಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ಸಂಚಾರ ಅಸ್ತವ್ಯಸ್ಥ
ಮಾಜಿ ಶಾಸಕ ಎಸ್ ಕೆ ಬಸವರಾಜನ್ ಹಾಗೂ ಸ್ವಾಮೀಜಿಗಳ ಜಗಳದಿಂದ ಹೀಗೆ ಆಗಿದೆ. ಕೋರ್ಟ್ ಏನ್ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ಸ್ವಾಮೀಜಿಗಳ ಮೇಲೆ ಆರೋಪ ಮಾಡಿರುವುದು ತಪ್ಪು ಎಂದರು.
ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಅವರು ಸಮಾಜವನ್ನು ತಿದ್ದುವಂತ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಿಗೆ ತೊಂದರೆ ನೀಡಬಾರದು ಎಂದು ಹೇಳಿದರು.
ಭಾರೀಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ಸಂಚಾರ ಅಸ್ತವ್ಯಸ್ಥ
ಅಂದಹಾಗೇ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮೈಸೂರಿನ ನಜರಾಬಾದ್ ಠಾಣೆಯಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಳಿಕ ತನಿಖೆ ಆರಂಭಿಸಿದ್ದಂತ ಪೊಲೀಸರು ನಿನ್ನೆ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ವೈದ್ಯಕೀಯ ಪರೀಕ್ಷೆಗೂ ಹಾಜರುಪಡಿಸಿದ್ದರು.
ದೆಹಲಿಯಲ್ಲಿ ಘೋರ ದುರಂತ: ಶ್ರೀಕೃಷ್ಣ ಮೂರ್ತಿಯ ನಿಮಜ್ಜನ ವೇಳೆ ಐವರು ಯುವಕರು ನದಿ ಪಾಲು