ಬೆಂಗಳೂರು: ಅನ್ಯಕೋಮಿನ ಮಹಿಳೆಯೊಬ್ಬರು ವಯೋವೃದ್ಧೆಯೊಬ್ಬರನ್ನು ಕಬೋರ್ಟ್ ನಲ್ಲಿ ಸುತ್ತಿಟ್ಟು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಈ ಮೂಲಕ ದೆಹಲಿಯ ಶ್ರದ್ಧಾವಾಕರ್ ಹತ್ಯೆ ಮಾದರಿಯಲ್ಲಿಯೇ ನಡೆದಿರುವಂತ ಕೊಲೆಯೊಂದು ಕರ್ನಾಟಕದಲ್ಲಿ ಬಯಲಾಗಿದೆ. ಈ ಪ್ರಕರಣ ಪತ್ತೆಯಾಗಿದ್ದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ದೆಹಲಿಯ ಶ್ರದ್ಧಾವಾಕರ್ ಹತ್ಯೆ ಪ್ರಕರಣ ಹಸಿಯಾಗಿರುವ ಮುನ್ನವೇ, ರಾಜ್ಯದಲ್ಲೂ ಅಂತದ್ದೇ ಮಾದರಿಯ ಕೊಲೆಯೊಂದು ನಡೆದಿರೋದು ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದಿದೆ. ಅನ್ಯಕೋಮಿನ ಮಹಿಳೆಯೊಬ್ಬರು ವೃದ್ಧೆಯೊಬ್ಬರನ್ನು ಕೊಲೆ ಮಾಡಿ, ಮೃತ ದೇಹವನ್ನು ಕಬೋರ್ಡ್ ನಲ್ಲಿ ಸುತ್ತಿ ಇಟ್ಟು, ನಾಪತ್ತೆಯಾಗಿರೋ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿನ ನಾಲ್ಕನೇ ಮಹಡಿಯಲ್ಲಿ ವಾಸವಿದ್ದಂತ ಪಾಯಲ್ ಖಾನ್ ಎಂಬಾಕೆ, ಮೂರು ದಿನಗಳ ಹಿಂದೆ ಕೆಳಮನೆಯಲ್ಲಿ ವಾಸವಿದ್ದಂತ ವಯೋವೃದ್ಧೆಯೊಬ್ಬರನ್ನು ತಮ್ಮ ಮನೆಗೆ ಕರೆತಂದಿದ್ದರು. ಆದ್ರೇ ಆ ವೃದ್ದೆ ಮೂರು ದಿನಗಳ ನಂತ್ರ ನಾಪತ್ತೆಯಾಗಿದ್ದರು.
BREAKING NEWS : ಚಾಮರಾಜನಗರದಲ್ಲಿ ರೈತನ ಮೇಲೆ ಎರಗಿದ ಹುಲಿ , ಬೆಚ್ಚಿಬಿದ್ದ ಜನ
ಈ ಬಗ್ಗೆ ಅನುಮಾನಗೊಂಡಂತ ಮನೆ ಮಾಲೀಕರು, ನಾಲ್ಕನೇ ಮಹಡಿಯಲ್ಲಿನ ಪಾಯಲ್ ಖಾನ್ ಬೀಗ ಹಾಕಿಕೊಂಡು ನಾಪತ್ತೆಯಾಗಿರೋ ಬಗ್ಗೆ ತಿಳಿದು ಬಂದಿದೆ. ಮನೆಯ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದಾಗ ಅಜ್ಜಿಯ ಮೃತದೇಹವನ್ನು ಬಟ್ಟೆಯಲ್ಲಿ ಪ್ಯಾಕ್ ಮಾಡಿ ಕಬೋರ್ಡ್ ನಲ್ಲಿ ಇಟ್ಟು ಪಾಯಲ್ ಖಾನ್ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಈ ಸಂಬಂಧ ಮಾಹಿತಿ ತಿಳಿದಂತೆ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಕೊಲೆ ಆರೋಪಿಯ ಪತ್ತೆಗಾಗಿ ಬಲೆ ಬೀಸಿದಿದ್ದಾರೆ.