ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಡ್ಯದಲ್ಲಿ ರೈತರು ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ದರ್ಶನ್ ಹಾಗೂ ಆತನ ಗ್ಯಾಂಗನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಪ್ರತಿಭಟನೆ ನಡೆಸಿದರು.
ಮಂಡ್ಯದಲ್ಲಿ ರೈತರು ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ 13 ಆರೋಪಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ದರ್ಶನ್ ವಿರುದ್ಧ ಮಂಡ್ಯದಲ್ಲಿ ಸಿಡಿದೆದ್ದ ರೈತರು, ಪವಿತ್ರ ಗೌಡ ಹೆಣ್ಣು ಕುಲಕ್ಕೆ ಅವಮಾನ. ಪವಿತ್ರ ಎಂದರೆ ಅದುಕ್ಕೊಂದು ಒಳ್ಳೆಯದಂತಹ ಅರ್ಥ ಇದೆ ಅಂತ ಹೆಸರು ಇಟ್ಟುಕೊಂಡು ಇಂತಹ ನೀತಿ ಕೆಲಸ ಮಾಡಿದವರು ಇವಳು ಹೆಣ್ಣು ಕುಲಕ್ಕೆ ಅವಮಾನ ಅಯೋಗ್ಯ ದರ್ಶನ್ ಪರದೆ ಮೇಲೆ ಬರಬಾರದು ಎಂದು ಪ್ರತಿಭಟನಾ ನಿರುದ ರೈತರು ಕಿಡಿ ಕಾರ್ಯಕರ್ತರು.
ಒಬ್ಬ ರೈತನ ಮಗನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ತಂದು ಕೊಲೆ ಮಾಡುತ್ತಾರೆ ಅಂದರೆ ಇನ್ನೂ ಇವರ ಹಿಂದೆ ಯಾವ ಯಾವ ಎಂತಹ ನೀಚ ಕೃತ್ಯಗಳನ್ನು ಮಾಡಿರಬಾರದು. ಈಗಾಗಲೇ ದರ್ಶನ್ ಮೇಲೆ ಹಲವಾರು ಕೆಎಸ್ ಗಳು ಇವೆ. ಹಾಗಾಗಿ ಈ ಒಂದು ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್ ನ್ನು ಎಲ್ಲರನ್ನೂ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ರೈತರು ಆಗ್ರಹಿಸಿದರು.