ನವದೆಹಲಿ: ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬಿಲಿಯನೇರ್ ಮುಖೇಶ್ ಅಂಬಾನಿ ಶನಿವಾರ ಘೋಷಿಸಿದ್ದಾರೆ. ಈ ತಿಂಗಳೊಳಗೆ 5G ಸೇವೆಗಳನ್ನು ಹೊರತರಲು ಜಿಯೋ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.
ಇಂಡಿಯನ್ ಮೊಬೈಲ್ ಕಾಂಗ್ರೆಸ್ (IMC) 2022 ಈವೆಂಟ್ನಲ್ಲಿ ಮಾತನಾಡಿದ ಅಂಬಾನಿ, ಜಿಯೋ ಕೈಗೆಟುಕುವ 5G ಸೇವೆಗಳನ್ನು ಡಿಸೆಂಬರ್ 2023 ರ ವೇಳೆಗೆ ದೇಶದ ಮೂಲೆ ಮೂಲೆಗಳಲ್ಲಿ ದೊರಕುವಂತೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು.
2047 ರ ವೇಳೆಗೆ ಭಾರತವನ್ನುಇಂದಿನ $3 ಟ್ರಿಲಿಯನ್ನಿಂದ 40-ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮೂಲಕ 5G ಸೇವೆಗಳು ಬೆಳವಣಿಗೆಯನ್ನು ವೇಗಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ. ಭಾರತೀಯ ಮೊಬೈಲ್ ಕಾಂಗ್ರೆಸ್ ಈಗ ಏಷ್ಯನ್ ಮೊಬೈಲ್ ಕಾಂಗ್ರೆಸ್ ಮತ್ತು ಗ್ಲೋಬಲ್ ಮೊಬೈಲ್ ಕಾಂಗ್ರೆಸ್ ಆಗಬೇಕು ಎಂದಿದ್ದಾರೆ.
BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್; ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ