Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

ಕೇವಲ 15 ವರ್ಷಕ್ಕೆ 5 ಪ್ರಶಸ್ತಿ : ಕಾರು ಜೊತೆಗೆ ವೈಭವ್ ಸೂರ್ಯವಂಶಿ ಪಡೆದ ನಗದು ಬಹುಮಾನ ಎಷ್ಟು ಗೊತ್ತಾ?

ಸೊಳ್ಳೆಗಳ ವಿರುದ್ಧವೇ ಸೊಳ್ಳೆಗಳ ಯುದ್ಧ: ಗೂಗಲ್‌ನ ‘ಮಸ್ಕಿಟೋ ಆರ್ಮಿ’ ಯೋಜನೆಯಲ್ಲಿ 3.2 ಕೋಟಿ ಸೊಳ್ಳೆಗಳ ಬಳಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ
INDIA

ವಾಹನ ಸವಾರರೇ ಈ ತಪ್ಪು ಮಾಡಿದ್ರೆ ಬ್ಲಾಕ್ ಆಗಲಿದೆ ನಿಮ್ಮ `ಫಾಸ್ಟ್ಯಾಗ್’ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

By kannadanewsnow57

ನವದೆಹಲಿ: ವಾಹನ ಸವಾರರಿಗೆ ಹಾಗೂ ಫಾಸ್ಟ್ಯಾಗ್ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಟೋಲ್ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯಲು ಹೊಸ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮವೇನು?
ಇನ್ನು ಮುಂದೆ ನಿಮ್ಮ ವಾಹನದ ನೋಂದಣಿ ಸಂಖ್ಯೆ (Vehicle Registration Number) ಮತ್ತು ಫಾಸ್ಟ್ಯಾಗ್ ಸಂಖ್ಯೆ ಕಡ್ಡಾಯವಾಗಿ ತಾಳೆಯಾಗಬೇಕು. ಒಂದು ವೇಳೆ ನಿಮ್ಮ ವಾಹನಕ್ಕೆ ಬೇರೆ ಯಾವುದೋ ನೋಂದಣಿ ಸಂಖ್ಯೆಯ ಫಾಸ್ಟ್ಯಾಗ್ ಬಳಸುತ್ತಿದ್ದರೆ ಅಥವಾ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಹೊಂದಿದ್ದರೆ ಅಂತಹ ಟ್ಯಾಗ್‌ಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಿ (Inactive) ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುವುದು.

ಬ್ಯಾಂಕ್‌ಗಳಿಗೆ ಕಠಿಣ ಸೂಚನೆ
ಫಾಸ್ಟ್ಯಾಗ್ ವಿತರಿಸುವ ಎಲ್ಲಾ ಬ್ಯಾಂಕಿಂಗ್ ಸಂಸ್ಥೆಗಳಿಗೆ NHAI ಸ್ಪಷ್ಟ ನಿರ್ದೇಶನ ನೀಡಿದೆ:

ಫಾಸ್ಟ್ಯಾಗ್ ವಿತರಿಸುವ ಮುನ್ನ ವಾಹನದ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ನೋಂದಣಿ ಸಂಖ್ಯೆ ಮತ್ತು ಟ್ಯಾಗ್ ಮಾಹಿತಿ ಮ್ಯಾಚ್ ಆಗದಿದ್ದಲ್ಲಿ ಅಂತಹ ಫಾಸ್ಟ್ಯಾಗ್‌ಗಳನ್ನು ಕೂಡಲೇ ರದ್ದುಗೊಳಿಸಬೇಕು.

ಟೋಲ್ ಪ್ಲಾಜಾಗಳಲ್ಲಿ ರೀಡರ್ ಮತ್ತು ವಾಹನದ ಸಂಖ್ಯೆ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ತಿಂಗಳಿನಿಂದ ಜಾರಿಗೆ ಬಂದ ಪ್ರಮುಖ ಬದಲಾವಣೆಗಳು:
ಕೇಂದ್ರ ಸರ್ಕಾರವು ಟೋಲ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ಈ ತಿಂಗಳು ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ:

ನಗದು ಪಾವತಿ ಬಂದ್: ಈ ತಿಂಗಳ 10ನೇ ತಾರೀಖಿನಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಫಾಸ್ಟ್ಯಾಗ್ ಅಥವಾ UPI ಮೂಲಕ ಮಾತ್ರ ಹಣ ಪಾವತಿಸಲು ಅವಕಾಶವಿದೆ.

ಭಾರಿ ದಂಡ: ಟೋಲ್ ಪಾವತಿಸದೆ ತಪ್ಪಿಸಿಕೊಳ್ಳಲು ಯತ್ನಿಸುವವರಿಗೆ ಇ-ನೋಟಿಸ್ ಕಳುಹಿಸುವುದರ ಜೊತೆಗೆ ಭಾರಿ ದಂಡ ವಿಧಿಸಲಾಗುತ್ತದೆ.

ಓವರ್‌ಲೋಡ್ ವಾಹನಗಳಿಗೆ ಬಿಸಿ: ನಿಗದಿತ ಮಿತಿಗಿಂತ ಹೆಚ್ಚು ತೂಕ ಹೊತ್ತೊಯ್ಯುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 4 ಪಟ್ಟು ಅಧಿಕ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಮಲ್ಟಿ ಲೈನ್ ಫ್ರೀ ಫ್ಲೋ ಟೋಲಿಂಗ್: ಭವಿಷ್ಯದಲ್ಲಿ ವಾಹನಗಳು ನಿಲ್ಲದೆ ಟೋಲ್ ಪಾವತಿಸುವ ‘ಮಲ್ಟಿ ಲೈನ್ ಫ್ರೀ ಫ್ಲೋ’ ವ್ಯವಸ್ಥೆಯನ್ನು ಜಾರಿಗೆ ತರಲು NHAI ಸಿದ್ಧತೆ ನಡೆಸುತ್ತಿದ್ದು, ಅದಕ್ಕಾಗಿ ಈ ‘ಒಂದು ವಾಹನ-ಒಂದು ಫಾಸ್ಟ್ಯಾಗ್’ ನಿಯಮ ಅತ್ಯಗತ್ಯವಾಗಿದೆ.

ಗಮನಿಸಿ: ನಿಮ್ಮ ಫಾಸ್ಟ್ಯಾಗ್‌ನಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಅಥವಾ ಕೆವೈಸಿ (KYC) ಪ್ರಕ್ರಿಯೆ ಬಾಕಿ ಇದ್ದರೆ ಕೂಡಲೇ ಅದನ್ನು ಸರಿಪಡಿಸಿಕೊಳ್ಳಿ, ಇಲ್ಲದಿದ್ದರೆ ಪ್ರಯಾಣದ ಮಧ್ಯೆ ಟೋಲ್ ಬಳಿ ಸಮಸ್ಯೆ ಎದುರಿಸಬೇಕಾಗಬಹುದು.

Motorists if you make this mistake your FASTag block will be blocked: Government issues new guidelines
Share. Facebook Twitter LinkedIn WhatsApp Email

Related Posts

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

1 Min Read

ಕೇವಲ 15 ವರ್ಷಕ್ಕೆ 5 ಪ್ರಶಸ್ತಿ : ಕಾರು ಜೊತೆಗೆ ವೈಭವ್ ಸೂರ್ಯವಂಶಿ ಪಡೆದ ನಗದು ಬಹುಮಾನ ಎಷ್ಟು ಗೊತ್ತಾ?

2 Mins Read

ಸೊಳ್ಳೆಗಳ ವಿರುದ್ಧವೇ ಸೊಳ್ಳೆಗಳ ಯುದ್ಧ: ಗೂಗಲ್‌ನ ‘ಮಸ್ಕಿಟೋ ಆರ್ಮಿ’ ಯೋಜನೆಯಲ್ಲಿ 3.2 ಕೋಟಿ ಸೊಳ್ಳೆಗಳ ಬಳಕೆ!

1 Min Read
Recent News

ಭಾರತದೊಂದಿಗೆ ಗಡಿ ವಿವಾದ: ಮಧ್ಯಸ್ಥಿಕೆಗಾಗಿ ಚೀನಾ ಮತ್ತು ಯುಕೆ ಮೊರೆ ಹೋದ ನೇಪಾಳ ಪ್ರಧಾನಿ!

ಕೇವಲ 15 ವರ್ಷಕ್ಕೆ 5 ಪ್ರಶಸ್ತಿ : ಕಾರು ಜೊತೆಗೆ ವೈಭವ್ ಸೂರ್ಯವಂಶಿ ಪಡೆದ ನಗದು ಬಹುಮಾನ ಎಷ್ಟು ಗೊತ್ತಾ?

ಸೊಳ್ಳೆಗಳ ವಿರುದ್ಧವೇ ಸೊಳ್ಳೆಗಳ ಯುದ್ಧ: ಗೂಗಲ್‌ನ ‘ಮಸ್ಕಿಟೋ ಆರ್ಮಿ’ ಯೋಜನೆಯಲ್ಲಿ 3.2 ಕೋಟಿ ಸೊಳ್ಳೆಗಳ ಬಳಕೆ!

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

State News
KARNATAKA

ಗುರು ರಾಶ್ಯಾಂತರ ಫಲ – ಗುರು ಅತಿಚಾರ ಯೋಗ

By ಸುರೇಶ್‌ KARNATAKA 2 Mins Read

ಶ್ರೀ ಸಾಕ್ಷಿ ಪಂಚ ಎರಡನೇ ಬಾರಿಗೆ ಗುರು ಅತಿಚಾರಯೋಗ ಆಗಲಿದೆ. ಅತಿಚಾರ ಯೋಗ ಎಂದರೆ ಗುರುಗ್ರಹದ ಚಲನೆ ಅತಿ ವೇಗವಾಗಿ…

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ: ಡಿಕೆ ಶಿವಕುಮಾರ್

ಸತತ 2ನೇ ಬಾರಿಗೆ ಟ್ರೋಫಿ ಗೆದ್ದ ‘RCB’ : ಗೆದ್ದ ತಂಡ, ರನ್ನರ್ ಅಪ್ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ

Rain Alert : ಇಂದು ಬೆಂಗಳೂರಲ್ಲಿ ಭಾರಿ ಮಳೆ : ಈ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.