ಪಶ್ಚಿಮಬಂಗಾಳ: ಬಂಧಿತ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ತಮ್ಮ ಎರಡನೇ ಫ್ಲಾಟ್ನಿಂದ ವಶಪಡಿಸಿಕೊಂಡ ಹಣ ಚಟರ್ಜಿಗೆ ಸೇರಿದ್ದು ಎಂದು ಹೇಳಿದ್ದಾರೆ.
BIGG NEWS : `ಜನೋತ್ಸವ ಕಾರ್ಯಕ್ರಮ’ ರದ್ದುಗೊಳಿಸಿದ ಕಾರಣ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಆಕೆಯ ಮೊದಲ ಫ್ಲಾಟ್ನಿಂದ 21 ಕೋಟಿ ರೂ.ಗಳನ್ನು ವಶಪಡಿಸಿಕೊಂಡ ಬಳಿಕ ತನಿಖಾ ಸಂಸ್ಥೆ ಆಕೆಯ ಎರಡನೇ ಅಪಾರ್ಟ್ಮೆಂಟ್ನಿಂದ 28 ಕೋಟಿ ರೂ. ನಗದು ಮತ್ತು 5 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡಿತ್ತು. ಇನ್ನು ಪತ್ತೆಯಾದ ಹಣವನ್ನು ಎಣಿಸಲು 10 ಗಂಟೆ ತೆಗೆದುಕೊಂಡ ಅಧಿಕಾರಿಗಳು, ಶೌಚಾಲಯದಿಂದ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಇಡಿ ತನಿಖೆಯಲ್ಲಿ ಅರ್ಪಿತಾ ಮುಖರ್ಜಿ ಸತ್ಯ ಹೊರ ಹಾಕಿದ್ದು, ವಸೂಲಿ ಮಾಡಿದ ಮೊತ್ತವು ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು, ಅವರ ಹಣವನ್ನು ಇಡಲು ನನ್ನ ಫ್ಲಾಟ್ ಅನ್ನು ಬಳಸಿಕೊಂಡಿದ್ದಾರೆ. ಆ ಫ್ಲಾಟ್ನಲ್ಲಿ ದೊಡ್ಡ ಮೊತ್ತವಿದೆ ಎಂದು ತನಗೆ ತಿಳಿದಿರಲಿಲ್ಲ. ಚಟರ್ಜಿ ಅವರು ಫ್ಲಾಟ್ಗೆ ಆಗಾಗ ಭೇಟಿ ನೀಡುತ್ತಿದ್ದರು. ಈ ಬಗ್ಗೆ ಅವರಿಗೆ ಮಾತ್ರ ತಿಳಿದಿದೆ ಎಂದು ಅರ್ಪಿತಾ ಒಪ್ಪಿಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ.
ಈ ಹಿಂದೆ ಅರ್ಪಿತಾ ತನ್ನ ಎರಡನೇ ಫ್ಲಾಟ್ನಲ್ಲಿಯೂ ನಗದು ಇದೆ ಎಂದು ತಿಳಿಸಿರಲಿಲ್ಲ ಎಂದು ಇಡಿ ಹೇಳಿದೆ. ಆದರೆ ಆಸ್ತಿ ವಿವರ ಪಡೆದು ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ನಗದು ಹಾಗೂ 5 ಕೆಜಿ ಮೌಲ್ಯದ ಚಿನ್ನ ಪತ್ತೆಯಾಗಿತ್ತು.
ವಶಪಡಿಸಿಕೊಂಡ 27.9 ಕೋಟಿ ರೂ.ಗಳಲ್ಲಿ 2,000 ಮತ್ತು 500 ರೂ ಮುಖಬೆಲೆಯ ನೋಟುಗಳು ಸೇರಿವೆ. 50 ಲಕ್ಷ ರೂ.ಗಳ ಕಟ್ಟುಗಳಲ್ಲಿ 2,000 ರೂ.ಗಳ ನೋಟುಗಳು ಮತ್ತು 20 ಲಕ್ಷ ರೂ. ಅಲ್ಲದೆ, 4.31 ಕೋಟಿ ಮೌಲ್ಯದ ಚಿನ್ನ ಮತ್ತು ಆಭರಣಗಳಲ್ಲಿ ತಲಾ 1 ಕೆಜಿಯ 3 ಚಿನ್ನದ ಗಟ್ಟಿಗಳು, ತಲಾ 500 ಗ್ರಾಂನ 6 ಕಂಗನ್ (ಬಳೆಗಳು) ಮತ್ತು ಚಿನ್ನದ ಪೆನ್ ಸೇರಿವೆ ಎಂದು ಇಡಿ ತಿಳಿಸಿದೆ.