ಚಿಕ್ಕಬಳ್ಳಾಪುರ : ಕಳೆದ ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿತ್ತು. ಹೇಳೇ ಚಿಕ್ಕಬಳ್ಳಾಪುರ ಕ್ಷೇತ್ರದ ಕೆಲವು ಬೂತ್ ಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಬಿಜೆಪಿ MLC ಎಂಟಿಬಿ ನಾಗರಾಜ ಗಂಭೀರ ಆರೋಪ ಮಾಡಿದರು.
ಈ ಕುರಿತಂತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಹೊಸಕೋಟೆ ವ್ಯಾಪ್ತಿಯ 15ರಿಂದ 20 ಬೂತ್ ಗಳಲ್ಲಿ ಚುನಾವಣಾ ಅಕ್ರಮ ನಡೆದಿದ್ದು, ಅಕ್ರಮವಾಗಿ ಮತದಾನ ಮಾಡಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎಂಟಿಬಿ ನಾಗರಾಜ್ ಗಂಭೀರವಾದ ಆರೋಪ ಮಾಡಿದರು.
ಹೊಸಕೋಟೆ, ಬೆಂಡಿಗಾನಹಳ್ಳಿ ಬೂತ್ ನಂಬರ್ 23 ರಲ್ಲಿ ಈ ಕುರಿತು ಗಲಾಟೆ ಆಗಿದೆ. ಮತ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಕೂಡ ಕೆಲವರು ಮತ ಹಾಕಲು ಬಂದಿದ್ದರು. ಮೃತಪಟ್ಟವರ ಹೆಸರಿನಲ್ಲಿ ಹಾಗೂ ಊರು ಬಿಟ್ಟು ಹೋಗಿರುವವರ ಹೆಸರಿನಲ್ಲಿ ಹೊರಗಿನಿಂದ ಕೆಲವರನ್ನು ಕರೆತಂದು ನಕಲಿ ಮತದಾನ ಮಾಡಿಸಲಾಗಿದೆ.ಅಕ್ರಮ ಮತದಾನ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಜೊತೆ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದದು.
ಗಲಾಟೆಯ ವೇಳೆ ಕೆಲವರು ನಮ್ಮವರ ಕಾರುಗಳನ್ನು ಹಾಳು ಮಾಡಿದ್ದಾರೆ. ಶಾಸಕ ಶರತ್ ಹಾಗೂ ಅವರ ಅಣ್ಣನ ಮಕ್ಕಳು ಗಲಾಟೆ ಮಾಡಿಸಿದ್ದಾರೆ. ಚುನಾವಣಾ ಅಕ್ರಮದ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ರಾಜ್ಯಪಾಲರಿಗೂ ಕೂಡ ಚುನಾವಣಾ ಅಕ್ರಮದ ವಿಚಾರ ಗಮನಕ್ಕೆ ತಂದಿದ್ದೇವೆ.ಅಕ್ರಮ ಚುನಾವಣೆಯ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎಮ್ ಟಿ ಬಿ ನಾಗರಾಜ್ ಹೇಳಿಕೆ ನೀಡಿದರು.