ಬೆಳಗಾವಿ : ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ವಿಜಯೇಂದ್ರ ಘೋಷಣೆ ಮಾಡಲಿ. ಯಾವುದೇ ಬ್ಯಾಂಕ್ ನಲ್ಲಿ ಹಣ ಇಟ್ಟಿಲ್ಲ ಅಂತ ಆಣೆ ಮಾಡಲಿ. ಎಡೆಯೂರು ಸಿದ್ದಲಿಂಗೇಶ್ವರನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡಲಿ. ಪ್ರತಿ ಮೂರು ತಿಂಗಳಿಗೊಮ್ಮೆ ಅಪ್ಪ ಮಕ್ಕಳು ದುಬೈಗೆ ಯಾಕೆ ಹೋಗುತ್ತೀರಿ? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ನೈತಿಕತೆ ಇಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಒಬ್ಬ ಮಹಾನ್ ಭ್ರಷ್ಟ. ಯಡಿಯೂರಪ್ಪ ತಾನು ಲಿಂಗಾಯತ ಅನ್ನೋದನ್ನ ಸಾಬೀತು ಮಾಡಿದ್ದಾರ? ಕೋವಿಡ್ ವೇಳೇ ಲೂಟಿ ಮಾಡಿದ್ದ ಎಂದೆ ಅದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಬಿವೈ ವಿಜಯೇಂದ್ರ ನಮ್ಮ ಭಿಕ್ಷೆಯಿಂದ ಶಾಸಕನಾಗಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಅದಕ್ಕೆ ರಾಜೀನಾಮೆ ಕೊಟ್ಟು ಗೆಲ್ಲುತ್ತೇನೆ ಅಂತ ವಿಜಯೇಂದ್ರ ಹೇಳಲಿಲ್ಲ. ನೀನೆ ಮಹಾಭ್ರಷ್ಟ ಈಗ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದೀಯಾ? ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಟೂರ್ ಫಿಕ್ಸ್ ಪ್ಲಾನ್ ಮಾಡುತ್ತಾರೆ. ರಾತ್ರಿ ಡಿಕೆ ಶಿವಕುಮಾರ್ ಮನೆಗೆ ಹೋಗಿ ಟೂರ್ ಫಿಕ್ಸ್ ಮಾಡ್ಕೊಂಡು ಬರುತ್ತಾರೆ. ಭ್ರಷ್ಟಾಚಾರದ ಬಗ್ಗೆ ಬಿವೈ ವಿಜಯೇಂದ್ರ ಮಾತನಾಡುತ್ತಾರೆ ಆದರೆ ಅವನೇ ತನ್ನ ತಂದೆಯ ಸಹಿ ನಕಲು ಮಾಡಿದ್ದಾನೆ. ಚೆಕ್ ನಲ್ಲಿ ಹಣ ತೆಗೆದುಕೊಂಡಿದ್ದಾನೆ ಅದರ ಬಗ್ಗೆ ಮಾತನಾಡಲ್ಲ ಎಂದು ಶಾಸಕ ಯತ್ನಾಳ್ ಗಂಭೀರವಾಗಿ ಆರೋಪಿಸಿದರು.
ನಿನ್ನೆ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಸೇರಿದ್ದರು ನನ್ನ ನಾಯಕತ್ವಕ್ಕೆ ಎಲ್ಲರೂ ಓಕೆ ಎಂದಿದ್ದಾರೆ ಬಿಜೆಪಿಯ ಶಿಸ್ತು ಸಮಿತಿ ಸದಸ್ಯ ಸರಿಯಾಗಿ ವರದಿ ಮಾಡಲಿ ಹಿಂದುಗಳು ಮನಸ್ಸು ಮಾಡಿದರೆ ಎಂತೆಂತಹ ಪಕ್ಷಕ್ಕೆ ಮಣ್ಣು ಕೊಡುತ್ತಾರೆ ಬಿಎಸ್ ಯಡಿಯೂರಪ್ಪ ಫೋಟೋ ಹಾಕಿದರೆ ವೋಟ್ ಹಾಕುವ ಕಾಲ ಹೋಯಿತು ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.