Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಆರ್ಥಿಕ ಬೆಳವಣಿಗೆಗೆ ಉತ್ತೇಜನ: ಪ್ರಧಾನಿ ಮೋದಿಯಿಂದ ಆರ್ಥಿಕ ಸಲಹಾ ಮಂಡಳಿಯೊಂದಿಗೆ ಉನ್ನತ ಮಟ್ಟದ ಸಭೆ

ಪಾಟ್ನಾ ಕೋಚಿಂಗ್ ಸೆಂಟರ್ ಮೇಲೆ ದಾಳಿ: ಪ್ರಕರಣದ ಬೆನ್ನಲ್ಲೇ ಪಾಟ್ನಾ ಸಿವಿಲ್ ಕೋರ್ಟ್‌ಗೆ ಶರಣಾದ ಖಾನ್ ಸರ್!

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೆಹಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಸಕ್ಸಸ್, ಸಂಪುಟ ಪುನರ್ ರಚನೆ ಫಿಕ್ಸ್ ಎಂದ ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಸಕ್ಸಸ್, ಸಂಪುಟ ಪುನರ್ ರಚನೆ ಫಿಕ್ಸ್ ಎಂದ ಶಾಸಕ ಗೋಪಾಲಕೃಷ್ಣ ಬೇಳೂರು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಶೀಘ್ರವೇ ಮಹತ್ವದ ಬದಲಾವಣೆಗಳು ಗಾಳಿಯಲ್ಲಿ ತೇಲಿ ಬರುತ್ತಿವೆ. ದೆಹಲಿಗೆ ತೆರಳಿದ್ದ ಶಾಸಕರ ತಂಡದ ಭೇಟಿ ಮತ್ತು ಹಿರಿಯ ನಾಯಕರ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗಳಿಗೆ ನಾಂದಿ ಹಾಡಿವೆ. ಸಚಿವ ಸ್ಥಾನದ ಆಕಾಂಕ್ಷಿಗಳು ಒಂದೆಡೆಯಾದರೆ, ಮುಖ್ಯಮಂತ್ರಿ ಸ್ಥಾನದ ಇಂಗಿತ ವ್ಯಕ್ತಪಡಿಸುತ್ತಿರುವ ನಾಯಕರು ಮತ್ತೊಂದೆಡೆ – ಒಟ್ಟಾರೆಯಾಗಿ ಹೈಕಮಾಂಡ್ ಅಂಗಳದಲ್ಲಿ ಈಗ ದೊಡ್ಡ ಆಟವೇ ಶುರುವಾಗಿದೆ. ಇದೆಲ್ಲದರ ನಡುವೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಸಕ್ಸಸ್ ಆಗಿದ್ದು, ಸಂಪುಟ ಪುನರ್ ರಚನೆ ಫಿಕ್ಸ್ ಎನ್ನುವ ಸುಳಿವನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿದ್ದಾರೆ.

ದೆಹಲಿ ಭೇಟಿ ಫಲಪ್ರದ: ಬೇಳೂರು ಗೋಪಾಲಕೃಷ್ಣ ವಿಶ್ವಾಸ

ಇಂದು ದೆಹಲಿ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, “ನಮ್ಮ ದೆಹಲಿ ಭೇಟಿ ಅತ್ಯಂತ ಫಲಪ್ರದವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುದೀರ್ಘ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದೇವೆ. ನಮ್ಮ ನೋವು-ನಲಿವುಗಳನ್ನು ಅವರು ಶಾಂತವಾಗಿ ಆಲಿಸಿದ್ದಾರೆ,” ಎಂದು ತಿಳಿಸಿದರು.

  • ಮಂತ್ರಿ ಮಂಡಲ ಬದಲಾವಣೆ: ಮುಂದಿನ ಒಂದೂವರೆ ತಿಂಗಳೊಳಗೆ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದ್ದು, ಹೊಸಬರಿಗೆ ಅವಕಾಶ ಸಿಗುವ ‘ಶುಭ ಸುದ್ದಿ’ ಬರಲಿದೆ ಎಂದು ಅವರು ಪರೋಕ್ಷವಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುಳಿವು ನೀಡಿದ್ದಾರೆ.

  • ಡಿಕೆಶಿ ಜೊತೆ ಮುನಿಸಿಲ್ಲ: “ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮ ಮೇಲೆ ಗರಂ ಆಗಿಲ್ಲ. ಸಂಘಟಿತವಾಗಿ ಕೆಲಸ ಮಾಡುವಂತೆ ಅವರು ನಮಗೆ ಸಲಹೆ ನೀಡಿದ್ದಾರೆ ಅಷ್ಟೇ,” ಎನ್ನುವ ಮೂಲಕ ಪಕ್ಷದೊಳಗಿನ ಭಿನ್ನಮತದ ವದಂತಿಗಳಿಗೆ ಬೇಳೂರು ತೆರೆ ಎಳೆದಿದ್ದಾರೆ.

ಸಚಿವ ರಾಜಣ್ಣ ಅವರಿಗೆ ಬೇಳೂರು ಟಾಂಗ್

ಸಚಿವ ಕೆ.ಎನ್. ರಾಜಣ್ಣ ಅವರ ಇತ್ತೀಚಿನ ಹೇಳಿಕೆಗಳ ವಿರುದ್ಧ ಬೇಳೂರು ಕಿಡಿಕಾರಿದ್ದಾರೆ. “ಸಿಎಂ ಮತ್ತು ಡಿಸಿಎಂ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಮಂತ್ರಿಗಿರಿ ಹೋಗಿದೆ ಎಂಬ ಕಾರಣದಿಂದ ನೀವು ಹೀಗೆ ಮಾತನಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದ ಅವರು, ಚುನಾವಣಾ ಪ್ರಚಾರದ ವಿಚಾರದಲ್ಲೂ ರಾಜಣ್ಣ ಅವರ ನಡೆಯನ್ನು ಟೀಕಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಈಗ “ಬದಲಾವಣೆಯ ಗಾಳಿ” ಬೀಸುತ್ತಿದೆ. ಒಂದೆಡೆ ಸಚಿವ ಸ್ಥಾನಕ್ಕಾಗಿ ಶಾಸಕರ ಲಾಬಿ ನಡೆಯುತ್ತಿದ್ದಾರೆ. ಮುಂದಿನ ಒಂದೂವರೆ ತಿಂಗಳು ಕರ್ನಾಟಕ ರಾಜಕಾರಣದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಲಿದೆ. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವರಾಗಲಿ ಎಂಬುದು ಕ್ಷೇತ್ರದ ಜನತೆ, ಅಪಾರ ಅಭಿಮಾನಿಗಳ ಆಸೆಯಾಗಿದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಈಡೇರಿಸಿ, ಸಿಹಿಸುದ್ದಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದರು…

ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಮದ್ದೂರು ಶಾಸಕ ಕೆ.ಎಂ.ಉದಯ್

ರಾಜ್ಯದಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿ: ಶೀಘ್ರ ಪರಿಹಾರ ನೀಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ

Share. Facebook Twitter LinkedIn WhatsApp Email

Related Posts

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

1 Min Read

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

1 Min Read

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

1 Min Read
Recent News

​ಆರ್ಥಿಕ ಬೆಳವಣಿಗೆಗೆ ಉತ್ತೇಜನ: ಪ್ರಧಾನಿ ಮೋದಿಯಿಂದ ಆರ್ಥಿಕ ಸಲಹಾ ಮಂಡಳಿಯೊಂದಿಗೆ ಉನ್ನತ ಮಟ್ಟದ ಸಭೆ

ಪಾಟ್ನಾ ಕೋಚಿಂಗ್ ಸೆಂಟರ್ ಮೇಲೆ ದಾಳಿ: ಪ್ರಕರಣದ ಬೆನ್ನಲ್ಲೇ ಪಾಟ್ನಾ ಸಿವಿಲ್ ಕೋರ್ಟ್‌ಗೆ ಶರಣಾದ ಖಾನ್ ಸರ್!

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು, ಬಡಿಸಲು ನ್ಯೂಸ್ ಪೇಪರ್ ಬಳಸುವಂತಿಲ್ಲ: FSSAI ನಿಷೇಧ

State News
KARNATAKA

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಮನಗರ: ಜಿಲ್ಲೆಯ ಬಿಡದಿ ಬಳಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ವಿಧಾನಸಭಾ ಕ್ಷೇತ್ರದ ಮಾಜಿ…

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.