ಕೊಪ್ಪಳ : ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಪಟ್ಟಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು. ಸಿಎಂ ಸಿದ್ದರಾಮಯ್ಯಗೆ ವೋಟ್ ಹಾಕಿದ್ದು ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಮಧ್ಯ ಬಿಟ್ಟು ಹೋಗಲಿ ಅಂತ ಅಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗು ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯಕ್ಕೆ ಅಪಪ್ರಸ್ತುತ 5 ವರ್ಷ ಇರಲಿ ಅಂತ ಸಿದ್ದರಾಮಯ್ಯಗೆ ವೋಟ್ ಹಾಕಲಾಗಿದೆ. ಐದು ವರ್ಷ ಆಗಿರುತ್ತಾರೆ ಅಂತ ಅಂದುಕೊಂಡಿದ್ದೇನೆ ನವೆಂಬರ್ ಕ್ರಾಂತಿ ಇಲ್ಲ ನಮ್ಮದು ಏನಿದ್ದರೂ ಶಾಂತಿ ಬದಲಾವಣೆ ಮಾತನಾಡಬಾರದು ಅಂತ ಹೈಕಮಾಂಡ್ ಹೇಳಿದೆ ಯಾರು ಸಹ ಬದಲಾವಣೆ ಕುರಿತು ಮಾತನಾಡಬೇಡಿ ಅಂತ ಹೈ ಕಮಾಂಡ್ ಹೇಳಿದೆ ಸಿಎಂ ಆಯ್ಕೆ ಮಾಡುವುದು ಪಕ್ಷ ಮತ್ತು ಹೈಕಮಾಂಡ್ ಶಾಸಕರ ಅಭಿಪ್ರಾಯದಲ್ಲಿ ಸಿಎಂ ಹಾಕಿ ಆಗೋದು ಎಂದು ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.