ಗೋಕಾಕ್: ಶಾಸಕ ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂಬುದಾಗಿ ಬೆಂಬಲಿಗರು ಹರಿ ಹಾಯ್ದಿದ್ದರು. ಅದಕ್ಕೆ ಪ್ರತಿಯಾಗಿ ನಾನೊಬ್ಬನೇ ಗೋಕಾಕ್ ಗೆ ಬರುತ್ತೇನೆ ಕಲ್ಲು, ಮೊಟ್ಟೆ ಹೊಡೆಯುತ್ತೀರೋ ನೋಡೇ ಬಿಡೋಣ ಎಂಬುದಾಗಿ ಯತ್ನಾಳ್ ಸವಾಲ್ ಹಾಕಿದ್ದಾರೆ.
ಇಂದು ನಗರದಲ್ಲಿನ ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಸತೀಶಅ ಜಾರಕಿಹೊಳಿ ಅವರ ಹಿಂದೂ ಪದದ ಬಗ್ಗೆ ಪ್ರಸ್ತಾಪಿಸಿದರು. ಈಗ ಕೇವಲ ಕ್ಷಮೆಯಾಚನೆ ಅಷ್ಟೇ ಮಾಡಿದ್ದೀರಿ. ಇನ್ಮುಂದೆ ಹಿಂದೂ ಧರ್ಮದ ವಿರುದ್ಧ ಹಾರಾಡಿದ್ರೇ ಅಷ್ಟೇ ಎಂಬುದಾಗಿ ಎಚ್ಚರಿಕೆ ನೀಡಿದರು.
ಸತೀಶ್ ಜಾರಕಿಹೊಳಿ ಬೆಂಬಲಿಗರ ಮಾತಿಗೆ ಕುರಿತಂತೆ ಪ್ರತಿಕ್ರಿಯಿಸಿದಂತ ಅವರು, ಗೋಕಾಕ್ ಗೆ ಯಾವ ಚೌಕ್ ನಲ್ಲಿ ಬೇಕಾದ್ರೂ ಬಂದು ನಿಲ್ಲುತ್ತೇನೆ. ಕಲ್ಲು ಹೊಒಡೆಯುತ್ತೀರೋ, ಮೊಟ್ಟೆ ಒಡೆಯುತ್ತೀರೋ ನೋಡೋಣ. ಪೊಲೀಸರನ್ನು ಬಿಟ್ಟು ಗೋಕಾಕ್ ಗೆ ನಾನೊಬ್ಬನೇ ಬರುತ್ತೇನೆ ಎಂಬುದಾಗಿ ಸವಾಲ್ ಹಾಕಿದರು.