ವಿಜಯಪುರ: ರಾಜ್ಯದ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರ ತಾಯಿ ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ್(84) ಅವರು ವಯೋಸಹಜವಾಗಿ ಇಂದು ನಿಧನರಾಗಿದ್ದಾರೆ.
ಮೃತ ಗಂಗಾಬಾಯಿ ಸಿದ್ದರಾಮಪ್ಪ ಪಾಟೀಲ್ ಅವರು ಮಕ್ಕಳಾದ ಮಹಾದೇವಿ ಪಾಟೀಲ, ಶಿವಶರಣಗೌಡ ಪಾಟೀಲ್, ಶಿವಾನಂದ ಪಾಟೀಲ್ ಹಾಗೂ ವಿಜುಗೌಡ ಪಾಟೀಲ್ ಸೇರಿದಂತೆ ಮೊಮ್ಮಕ್ಕಳು, ಅವರ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಮೃತ ಸಚಿವ ಶಿವಾನಂದ ಪಾಟೀಲ್ ಅವರ ತಾಯಿ ಗಂಗಾಬಾಯಿ ಅವರನ್ನು ಇಂದು ಸಂಜೆ 4.30ರ ವೇಳೆಗೆ ವಿಜಯಪುರದ ಜಮಖಂಡಿ ರಸ್ತೆಯಲ್ಲಿರುವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.
BREAKING: ಬೆಂಗಳೂರಲ್ಲಿ ಪರ್ಫ್ಯೂಮ್ ಗೋಡೌನ್‍ನಲ್ಲಿ ಅಗ್ನಿ ಅವಘಡ: ಮುಗಿಲೆತ್ತರಕ್ಕೆ ಹಬ್ಬಿದ ಜ್ವಾಲೆ








