Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ರಾಜಕೀಯ ಇನ್ನಿಂಗ್ಸ್ ಶುರು : HD ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರ್ಪಡೆ!

ಬೇಸಿಗೆಯಲ್ಲಿ ತರಕಾರಿ ಹಾಳಾಗದಂತೆ ತಡೆಯಲು FSSAI ಸೂತ್ರ: ಬೇಸಿಗೆಯಲ್ಲೂ ತರಕಾರಿಗಳನ್ನು ಫ್ರೆಶ್ ಹಾಗೂ ಸುರಕ್ಷಿತವಾಗಿಡಲು ಇಲ್ಲಿದೆ ತಜ್ಞರ ಸಲಹೆಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇತಿಹಾಸದಲ್ಲೇ ಮೊದಲು: ಕರ್ನಾಟಕ ದ್ವಿತೀಯ PUC ಅಂಕಪಟ್ಟಿ ‘ಡಿಜಿಲಾಕರ್’ನಲ್ಲಿ ಲಭ್ಯ!
KARNATAKA

ಇತಿಹಾಸದಲ್ಲೇ ಮೊದಲು: ಕರ್ನಾಟಕ ದ್ವಿತೀಯ PUC ಅಂಕಪಟ್ಟಿ ‘ಡಿಜಿಲಾಕರ್’ನಲ್ಲಿ ಲಭ್ಯ!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಈ ಬಾರಿ ಐತಿಹಾಸಿಕ ಮತ್ತು ಅತ್ಯಂತ ಅನುಕೂಲಕರ ಕ್ರಮವೊಂದನ್ನು ಕೈಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿ (Marks Card) ಈಗ ಡಿಜಿಟಲ್ ರೂಪದಲ್ಲಿ ಡಿಜಿಲಾಕರ್ (DigiLocker) ಮೂಲಕ ಲಭ್ಯವಾಗಲಿದೆ.

ಡಿಜಿಟಲ್ ಅಂಕಪಟ್ಟಿ ಲಭ್ಯತೆ ಯಾವಾಗ?

ಮಂಡಳಿಯ ಪ್ರಕಟಣೆಯ ಪ್ರಕಾರ, ವಿದ್ಯಾರ್ಥಿಗಳು 09-04-2026ರ ಮಧ್ಯಾಹ್ನ 3.00 ಗಂಟೆಯಿಂದ ತಮ್ಮ ಡಿಜಿಲಾಕರ್ ಖಾತೆಗಳಲ್ಲಿ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಡೌನ್‌ಲೋಡ್ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅಂಕಪಟ್ಟಿ ಪಡೆಯಬಹುದು:

  • ಅಧಿಕೃತ ಜಾಲತಾಣ: https://www.digilocker.gov.in ಗೆ ಭೇಟಿ ನೀಡಿ.

  • ಪ್ರಕ್ರಿಯೆ: ಲಾಗಿನ್ ಆದ ನಂತರ ‘Education’ ವಿಭಾಗದಲ್ಲಿ ಕರ್ನಾಟಕ ಪಿಯು ಮಂಡಳಿಯನ್ನು ಆಯ್ಕೆ ಮಾಡಿ, ಅಗತ್ಯ ಮಾಹಿತಿ ನೀಡಿ ಅಂಕಪಟ್ಟಿ ಪಡೆಯಿರಿ.

  • ಸಹಾಯ ವಿಡಿಯೋ: ಅಂಕಪಟ್ಟಿ ಡೌನ್‌ಲೋಡ್ ಮಾಡುವ ಹಂತ-ಹಂತದ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮಂಡಳಿಯು ಈ ವಿಶೇಷ ವಿಡಿಯೋ ಲಿಂಕ್ ಅನ್ನು ಹಂಚಿಕೊಂಡಿದೆ: https://tinyurl.com/mw84wmh9.

ಈ ಕ್ರಮದ ಲಾಭಗಳೇನು?

ಈ ಡಿಜಿಟಲ್ ಅಂಕಪಟ್ಟಿಯು ಭೌತಿಕ ಅಂಕಪಟ್ಟಿಯಷ್ಟೇ ಮಾನ್ಯತೆ ಹೊಂದಿದ್ದು, ಉನ್ನತ ಶಿಕ್ಷಣದ ಪ್ರವೇಶಾತಿ ಸಮಯದಲ್ಲಿ ದಾಖಲೆಗಳ ಪರಿಶೀಲನೆಗೆ ಇದು ಹೆಚ್ಚು ಸಹಕಾರಿಯಾಗಲಿದೆ. ಅಂಕಪಟ್ಟಿ ಕಳೆದುಹೋಗುವ ಅಥವಾ ಹಾನಿಯಾಗುವ ಭೀತಿಯಿಲ್ಲದೆ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲೇ ಇದನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

ಅಧ್ಯಕ್ಷರ ಮನವಿ

ವಿದ್ಯಾರ್ಥಿಗಳು ಯಾವುದೇ ಸುಳ್ಳು ಸುದ್ದಿ ಅಥವಾ ಅನಧಿಕೃತ ಲಿಂಕ್‌ಗಳಿಗೆ ಮೊರೆ ಹೋಗದೆ, ಮಂಡಳಿಯ ಅಧಿಕೃತ ಜಾಲತಾಣ ಹಾಗೂ ಡಿಜಿಲಾಕರ್ ಮೂಲಕವೇ ಅಂಕಪಟ್ಟಿಯನ್ನು ಪಡೆದುಕೊಳ್ಳಬೇಕು ಎಂದು ಮಂಡಳಿಯ ಅಧ್ಯಕ್ಷರು ಈ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ನಾಳೆ 3 ಗಂಟೆಗೆ ಕರ್ನಾಟಕ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 09-04-2026ರಂದು ಮಧ್ಯಾಹ್ನ 3.00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು.

ಫಲಿತಾಂಶ ವೀಕ್ಷಿಸುವುದು ಹೇಗೆ? ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ವಿಧಾನಗಳ ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪಡೆದುಕೊಳ್ಳಬಹುದು:

  • ಅಧಿಕೃತ ವೆಬ್‌ಸೈಟ್: https://karresults.nic.in ಲಿಂಕ್ ಮೂಲಕ ಫಲಿತಾಂಶ ವೀಕ್ಷಿಸಬಹುದು.

  • ಮೊಬೈಲ್ ಆಪ್: ಕರ್ನಾಟಕ ಒನ್ (KarnatakaOne) ಮೊಬೈಲ್ ಆಪ್ ಮೂಲಕವೂ ಮಾಹಿತಿ ಪಡೆಯಬಹುದು.

  • ನೇರ ಸಂದೇಶ: ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಲಿಯಿಂದಲೇ ವಾಟ್ಸಾಪ್ (WhatsApp) ಅಥವಾ ಎಸ್‌ಎಂಎಸ್ (SMS) ಮೂಲಕ ಫಲಿತಾಂಶದ ವಿವರಗಳನ್ನು ರವಾನಿಸಲಾಗುವುದು.

  • ಕಾಲೇಜುಗಳಲ್ಲಿ ಲಭ್ಯತೆ: ಸಂಬಂಧಿತ ಕಾಲೇಜುಗಳಿಗೂ ಸಹ ದಿನಾಂಕ 09-04-2026ರ ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

2 Mins Read

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ರಾಜಕೀಯ ಇನ್ನಿಂಗ್ಸ್ ಶುರು : HD ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರ್ಪಡೆ!

2 Mins Read

ಸಾರ್ವಜನಿಕರೇ ಗಮನಿಸಿ: ‘ವಂಶಾವಳಿ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

2 Mins Read
Recent News

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ರಾಜಕೀಯ ಇನ್ನಿಂಗ್ಸ್ ಶುರು : HD ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರ್ಪಡೆ!

ಬೇಸಿಗೆಯಲ್ಲಿ ತರಕಾರಿ ಹಾಳಾಗದಂತೆ ತಡೆಯಲು FSSAI ಸೂತ್ರ: ಬೇಸಿಗೆಯಲ್ಲೂ ತರಕಾರಿಗಳನ್ನು ಫ್ರೆಶ್ ಹಾಗೂ ಸುರಕ್ಷಿತವಾಗಿಡಲು ಇಲ್ಲಿದೆ ತಜ್ಞರ ಸಲಹೆಗಳು!

​’ಭಾರತ ನನ್ನ ಮೇಲೆ ಶೇ. 100 ರಷ್ಟು ಭರವಸೆ ಇಡಬಹುದು’: ಡೊನಾಲ್ಡ್ ಟ್ರಂಪ್ ಐತಿಹಾಸಿಕ ಘೋಷಣೆ!

State News
KARNATAKA

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

By ಸುರೇಶ್‌ KARNATAKA 2 Mins Read

ಉತ್ತರಕನ್ನಡ : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋಗಿ ಸಮುದ್ರದ ನೀರಿನ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ…

ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ರಾಜಕೀಯ ಇನ್ನಿಂಗ್ಸ್ ಶುರು : HD ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರ್ಪಡೆ!

ಸಾರ್ವಜನಿಕರೇ ಗಮನಿಸಿ: ‘ವಂಶಾವಳಿ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

BIG UPDATE : ಭಟ್ಕಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ : ನೀರುಪಾಲಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಪತ್ತೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.