ಮೈಸೂರು: ದಸರಾ ಮಹೋತ್ಸವ ( Mysuru Dasara Mahotsav 2022 ) ಸಂಬಂಧ ಬಿಡುಗಡೆ ಮಾಡಲಾಗುತ್ತಿದ್ದಂತ ಪಾಸ್ ಗೋಲ್ಮಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿದೆ ಗೋಲ್ಡ್ ಪಾಸ್ ( Gold Pass ) ಸಹಿತ ಎಲ್ಲಾ ಮಾದರಿಯ ಪಾಸ್ ಗಳನ್ನು ರದ್ದು ಮಾಡಲಾಗಿದೆ ಎಂಬುದಾಗಿ ಸಚಿವ ಎಸ್ ಟಿ ಸೋಮಶೇಖರ್ ( Minister ST Somashekhar ) ಘೋಷಣೆ ಮಾಡಿದ್ದಾರೆ.
BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಈ ಬಾರಿ ದಸರಾ ಗೋಲ್ಡ್ ಪಾಸ್ ಇಲ್ಲ. ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾದ ಗೋಲ್ಡ್ ಪಾಸ್ ರದ್ದು ಪಡಿಸಲಾಗಿದೆ. ಆದರೆ ಜನರ ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ ಎಂದರು.
ಇನ್ನೂ ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಪಾಸ್ಗಳನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ. ಪಾಸ್ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್ಗಳಿಂದ ಗೋಲ್ಮಾಲ್ ಉಂಟಾಗುವ ಆರೋಪಗಳಿವೆ. ಅಂತಹ ಘಟನೆಗಳಿಗೆ ಈ ಬಾರಿ ಅವಕಾಶ ಇಲ್ಲ ಎಂದರು.
ಪಾಸಿನ ವಿಸ್ತೃತವಾದ ಚರ್ಚೆ ನಡೆಯುತ್ತಿದೆ. ವಿವಿಐಪಿ, ಕರ್ತವ್ಯ ನಿರತ ಸಿಬ್ಬಂದಿ ಪಾಸ್ ಬಿಟ್ಟು ಎಲ್ಲಾ ಪಾಸ್ ರದ್ದು ಮಾಡಲಾಗಿದೆ ಎಂಬುದಾಗಿ ಹೇಳಿದರು. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವದಲ್ಲಿ ಗೋಲ್ಡ್ ಪಾಸ್ ಸಹಿತ ಎಲ್ಲಾ ಪಾಸ್ ರದ್ದು ಮಾಡಲಾಗಿದೆ ಎಂಬುದಾಗಿ ಘೋಷಣೆ ಮಾಡಿದರು.