ಬೆಂಗಳೂರು: ಶಿಕ್ಷಕರು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಿಂದಿನ ಸಿಎಂ ಸಿದ್ಧರಾಮಯ್ಯ ಅವರಿಗೆ ಇದ್ದ ಬದ್ಧತೆ ಈಗಿನ ಮುಖ್ಯಮಂತ್ರಿಗಳಿಗೆ ಇಲ್ಲ. ನಿತ್ಯ ಯೂಟರ್ನ್ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ. ಸಚಿವ ಬಿ.ಸಿ ನಾಗೇಶ್ ಅವರು ತಮ್ಮ ಹಿಡನ್ ಅಜೆಂಡಾಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನ ಹದಗೆಡಿಸಬಾರದು ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಶಿಕ್ಷಕರು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಿಂದಿನ ಸಿಎಂ @siddaramaiah ಅವರಿಗೆ ಇದ್ದ ಬದ್ಧತೆ ಈಗಿನ ಮುಖ್ಯಮಂತ್ರಿಗಳಿಗೆ ಇಲ್ಲ.
ನಿತ್ಯ ಯೂಟರ್ನ್ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ.
ಸಚಿವ ಬಿ.ಸಿ ನಾಗೇಶ್ ಅವರು ತಮ್ಮ ಹಿಡನ್ ಅಜೆಂಡಾಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನ ಹದಗೆಡಿಸಬಾರದು.
– @RameshBabuKPCC pic.twitter.com/kcNBHVI7lT— Karnataka Congress (@INCKarnataka) December 6, 2022
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಿ.ಸಿ ನಾಗೇಶ್ ಅವರು ಶಿಕ್ಷಣ ಸಚಿವರಾದ ನಂತರ ಅನೇಕ ಯೂಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಸೃಷ್ಟಿಸುತ್ತಿರುವ ಗೊಂದಲ ಹಾಗೂ ತಪ್ಪಿನ ಪರಿಣಾಮವನ್ನು ಶಿಕ್ಷಣ ಕ್ಷೇತ್ರ ಮುಂದಿನ ಹತ್ತಾರು ವರ್ಷ ಎದುರಿಸಬೇಕಾಗಿದೆ. ತಕ್ಷಣ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡಿ ಸಮರ್ಥರನ್ನು ಸಚಿವರಾಗಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿ.ಸಿ ನಾಗೇಶ್ ಅವರು ಶಿಕ್ಷಣ ಸಚಿವರಾದ ನಂತರ ಅನೇಕ ಯೂಟರ್ನ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಅವರು ಸೃಷ್ಟಿಸುತ್ತಿರುವ ಗೊಂದಲ ಹಾಗೂ ತಪ್ಪಿನ ಪರಿಣಾಮವನ್ನು ಶಿಕ್ಷಣ ಕ್ಷೇತ್ರ ಮುಂದಿನ ಹತ್ತಾರು ವರ್ಷ ಎದುರಿಸಬೇಕಾಗಿದೆ.
ತಕ್ಷಣ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡಿ ಸಮರ್ಥರನ್ನು ಸಚಿವರಾಗಿ ನೇಮಿಸಬೇಕು.
– @RameshBabuKPCC pic.twitter.com/pHIcbJQmYk— Karnataka Congress (@INCKarnataka) December 6, 2022