ವಿಜಯನಗರ: ಎಸ್ಟಿ ಮೀಸಲಾತಿಗಾಗಿ ( ST Reservation ) ಸ್ವಾಮೀಜಿಗಳು ಧರಣಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಮಾತು, ಹೇಳಿದಂತೆ ನಡೆದುಕೊಳ್ಳಲು ಬದ್ಧವಾಗಿದೆ. ಒಂದು ವೇಳೆ ಎಸ್ ಟಿ ಸಮುದಾಯಕ್ಕೆ ಅವಮಾನವಾದ್ರೇ ನಾನು ರಾಜೀನಾಮೆ ನೀಡೋದಕ್ಕೂ ಸಿದ್ಧವಾಗಿರೋದಾಗಿ ಸಚಿವ ಬಿ.ಶ್ರೀರಾಮುಲು ( Minister B Sriramulu ) ಘೋಷಣೆ ಮಾಡಿದ್ದಾರೆ.
ಇಂದು ವಿಜಯನಗರದ ಕೊಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ( CM Basavaraj Bommai ) ನೇತೃತ್ವದ ಸರ್ಕಾರ ಅಕ್ಟೋಬರ್ 8 ರಂದು ಸಭೆ ಕರೆದಿದೆ ಎಂದರು.
ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ( Sriramulu) ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ, ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಳ್ಳಲಿದೆ. ಎಸ್ ಟಿ ಮೀಸಲಾತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
ಎಸ್ ಟಿ ಮೀಸಲಾತಿ ಹೆಚ್ಚಿಸುವಂತೆ ಸ್ವಾಮೀಜಿ ಧರಣಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ಕೊಡಿಸುವುದಾಗಿ ಮಾತು ನೀಡಿದ್ದೆ, ಎಸ್ ಟಿ ಸಮುದಾಯಕ್ಕೆ ಅವಮಾನವಾದರೆ ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ, ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತನ್ನು ನಾವು ತಪ್ಪೋದಿಲ್ಲ ಎಂದು ತಿಳಿಸಿದರು.