ವಿಜಯನಗರ: ಹೊಸಪೇಟೆ ಕ್ಷೇತ್ರದ ನಗರಸಭೆ, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ( Minister Anand Singh ) ದೀಪಾವಳಿ ಭರ್ಜರಿ ಗಿಫ್ಟ್ ( Deepavali Gift ) ನೀಡಿದ್ದಾರೆ. ಬೆಳ್ಳಿ, ನಗದು, ರೇಷ್ಮೆ ಸೀರೆ ಮತ್ತು ಪಂಚೆಯನ್ನು ಉಡುಗೋರೆಯಾಗಿ ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನಪ್ರತಿನಿಧಿಗಳ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತನ್ನ ಕ್ಷೇತ್ರದ ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು 182 ಗ್ರಾಮ ಪಂಚಾಯ್ತಿ ಸದಸ್ಯರಿಗೆ ಬೆಳ್ಳಿ, ನಗದು, ರೇಷ್ಣೆ ಸೀರೆ, ಪಂಚೆ ನೀಡಿ, ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆಗೆ ಆಹ್ವಾನಿಸಿದ್ದಾರೆ.
‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ
ಅಂದಹಾಗೇ ನಗರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರಿಗೆ ತಲಾ 1 ಲಕ್ಷದ 44 ಸಾವಿರ ರೂ ನಗದು, 144 ಗ್ರಾಂ ಚಿನ್ನ, 1 ಕೆಜಿ ಬಳ್ಳಿ, ರೇಷ್ಣೆ ಸೀತಿ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಪ್ರೂಟ್ಸ್ ನೀಡಿದ್ದಾರೆ.
‘ನನ್ನ ಬಿಟ್ರೆ ಯಾವನೂ ಮುಖ್ಯಮಂತ್ರಿ ಆಗೋಕೆ ಸಾಧ್ಯವಿಲ್ಲ’ : H.D ಕುಮಾರಸ್ವಾಮಿ ಓಪನ್ ಚಾಲೆಂಜ್
ಇನ್ನೂ ಹೊಸಪೇಟೆ ಕ್ಷೇತ್ರ ವ್ಯಾಪ್ತಿಯ 182 ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅರ್ಧ ಕೆಜಿ ಬೆಳ್ಳಿ, 27 ಸಾವಿರ ನಗದು, ರೇಷ್ಮೆ ಸೀರೆ, ಪಂಚೆ, ರೇಷ್ಮೆ ಶರ್ಟ್, ಮುತ್ತಿನ ಹಾರ ಮತ್ತು ಡ್ರೈ ಪ್ರೂಟ್ಸ್ ನೀಡಿ, ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆಗೆ ಆಮಂತ್ರಣ ನೀಡಿದ್ದಾರೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತನ್ನ ಕ್ಷೇತ್ರದ ಜನಪ್ರತಿನಿಧಿಗಳಿಗೆ ನೀಡಿರುವಂತ ದೀಪಾವಳಿ ಗಿಫ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ನೆಟ್ಟಿಗರು ಉಬ್ಬೇರಿಸಿ, ಅಚ್ಚರಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ