ತುಮಕೂರು: ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವನಾಗಲು ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರು ಕಾರಣ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ವಾಹನ ಸವಾರರೇ ಎಚ್ಚರ..! ನ್ಯೂ ಇಯರ್ಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್, ಜೇಬಿಗೆ ಕತ್ತರಿ ಗ್ಯಾರಂಟಿ..!
ನಗರದಲ್ಲಿ ಮಾತನಾಡಿದ ಅವರು, ನನ್ನದು ಮತ್ತು ಸುಧಾಕರ್ರದ್ದು ತಂದೆ-ಮಗನ ಸಂಬಂಧ ಎಂದು ಡಾ. ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯ ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ದೊಡ್ಡಸೆಗ್ಗರೆ ಗ್ರಾಮ ಅವರು ಮಾತನಾಡಿ, ಬಹಳ ಸೂಕ್ಷ್ಮ ದೃಷ್ಟಿಯಿಂದ ನಾವು ಮಂತ್ರಿಗಳನ್ನು ನೋಡುತ್ತೇವೆ. ಎಲ್ಲಾ ಸಮುದಾಯಗಳ ಅಭಿವೃದ್ಧಿ ಮಾಡಿದ ಸಚಿವರೆಂದರೆ ಅದು ಸುಧಾಕರ ಅವರು ಮಾತ್ರ. ಕೊರೊನಾ ಬಂದಾಗ ಇವರಿಗೆ ಬಂದ ಕಷ್ಟ ಸಿಎಂಗೂ ಬಂದಿಲ್ಲ. ಕೊರೊನಾ ಸಂದರ್ಭದಲ್ಲಿ ನಾವೆಲ್ಲ ಬೈದಿದ್ದೇವೆ. ಕುರಿಗಳಿಗೆ ಹಾಕಿದಂತೆ ಮಾಸ್ಕ್ ಹಾಕಬೇಕು ಅಂತಾ ಸಿಟ್ಟಾಗಿದ್ದೇವೆ. ಆ ವೇಳೆ ಕ್ರಮ ತೆಗೆದುಕೊಂಡು ಲಕ್ಷಾಂತರ ಪ್ರಾಣ ಉಳಿಸಿದ್ದಾರೆ ಎಂದರು.