Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ: ಇಂದು ಅಧಿಕೃತವಾಗಿ ಸಿಎಂ ವಿಜಯ್ ಸರ್ಕಾರ ಸೇರಲಿರುವ ಎಐಎಡಿಎಂಕೆ ಬಂಡಾಯ ಬಣ!

kukke

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಐತಿಹಾಸಿಕ ದಾಖಲೆ: ₹167.89 ಕೋಟಿ ಆದಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ: ಸಂಸದ ಬಸವರಾಜ ಬೊಮ್ಮಾಯಿ
KARNATAKA

ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ: ಸಂಸದ ಬಸವರಾಜ ಬೊಮ್ಮಾಯಿ

By ವಸಂತ ಬಿ ಈಶ್ವರಗೆರೆ

ನವದೆಹಲಿ: ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದು ಎಲ್ಲಿರಿಗೂ ಗೊತ್ತಿರುವ ವಿಚಾರ ಇಂದು ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಒಂದು ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಈಗ ಕೆಇಆರ್‌ಸಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದು ಡಿಜಿಟಲ್ ಮೀಟರ್ ಅಳವಡಿಕೆಯ ಹಗರಣ ಮಾಡಿದ್ದಾರೆ. ಪ್ರತಿ ಮೀಟರ್ ನಿರ್ವಹಣೆಗೆ 5 ಸಾವಿರಕ್ಕಿಂತಲೂ ಹೆಚ್ಚಳ ಹೊರೆ ಹಾಕಿದ್ದಾರೆ. ಇದರಿಂದ ಪ್ರತಿಯೊಂದು ಕುಟುಂಬದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂದರು.

ಕಳೆದ ವರ್ಷ ಬಜೆಟ್ ಹೊರತಾಗಿಯೂ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿಗೆ ತೆರಿಗೆ ಹಾಕಿದ್ದರು. ತಮ್ಮ ಸರ್ಕಾರದ ಆರ್ಥಿಕ ದಿವಾಳಿತನ ಮರೆಮಾಚಲು ರಾಜ್ಯದ ಜನತೆಯ ಮೇಲೆ ಹೊರ ಹಾಕುತ್ತಿದ್ದಾರೆ. ರಾಜ್ಯದ ಜನರು ಬೆಲೆ ಏರಿಕೆಯನ್ನು ನಿಲ್ಲಿಸಿ ಎಂದು ಹೇಳಬೇಕಿದೆ. ಹಾಲಿನ ದರ ಹೆಚ್ಚಳ ಮಾಡಿರುವುದನ್ನು ರೈತರಿಗೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಯಾವತ್ತೂ ಹೆಚ್ಚಳ ಮಾಡಿರುವ ಹಾಲಿನ ಮೊತ್ತವನ್ನು ರೈತರಿಗೆ ನೀಡಿಲ್ಲ. ರೈತರ ಹೆಸರಿನಲ್ಲಿ ಗ್ರಾಹಕರಿಂದ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು

ರಾಜ್ಯ ಸರ್ಕಾರ ಕೆಎಂಎಫ್‌ನಲ್ಲಿ ಆಗುತ್ತಿರುವ ಅನಗತ್ಯ ಸೋರಿಕೆಯನ್ನು ತಡೆಯುತ್ತಿಲ್ಲ. ಅಲ್ಲದೇ ಕೆಎಂಎಫ್ ಮೇಲಿಂದ ಮೇಲೆ ಹಾಲಿನ ದರ ಏರಿಕೆ ಮಾಡುತ್ತಿರುವುದರಿಂದ ಖಾಸಗಿ ಕಂಪನಿಗಳು ಪ್ರವೇಶ ಮಾಡಲು ಅವಕಾಶವಾಗುತ್ತಿದೆ. ಇದರಿಂದ ಪರೋಕ್ಷವಾಗಿ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಕಾಂಗ್ರೆಸ್‌ನಿಂದ ಡಬಲ್ ದೋಖಾ ಆಗುತ್ತಿದೆ ಎಂದು ಆರೋಪಿಸಿದರು.

ಹಾಲು, ವಿದ್ಯುತ್ ದರದ ಜೊತೆಗೆ ಮೆಟ್ರೊ, ಬಸ್‌ದರ ಎಲ್ಲವೂ ಹೆಚ್ಚಳ ಮಾಡಿದ್ದಾರೆ. ಪ್ರತಿ ದಿನ ಜನರ ಮೇಲೆ ತೆರಿಗೆ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿರುವ ಸುದ್ದಿ ಕೇಳುತ್ತಿದ್ದೇವೆ. ಗ್ರಾಮೀಣ ಜನರಿಗೆ ಈ ಸರ್ಕಾರ ಒಂದು ಶಾಪವಾಗಿ ಪರಿಣಮಿಸಿದೆ. ಪ್ರತಿ ದಿನ ಬಡವರು ಬೆಳಿಗ್ಗೆ ಎದ್ದ ತಕ್ಷಣ ಯಾವ ತೆರಿಗೆ ಹೆಚ್ಚಳವಾಗಿದೆ ಎಂದು ನೋಡುವ ಪರಿಸ್ಥಿತಿ ಬಂದಿದೆ ಎಂದರು‌.

ರಾಷ್ಟ್ರೀಯ ಹಣದುಬ್ಬರಕ್ಕಿಂತ ಕರ್ನಾಟಕದ ಹಣದುಬ್ಬರ ಹೆಚ್ಚಳವಿದೆ. ಇದೆಲ್ಲಾ ಗ್ಯಾರೆಂಟಿ ಕಾರಣದಿಂದ ಆಗುತ್ತಿದೆ. 1.5 ಲಕ್ಷ ಕೋಟಿ ರೂ. ಗ್ರಾರೆಂಟಿಗೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರವೂ ಮುಳಗುತ್ತಿದ್ದು, ಜನರನ್ನೂ ಮುಳುಗಿಸುತ್ತಿದ್ದಾರೆ. ಮೂರು ಬಜೆಟ್‌ನಲ್ಲಿ ಸಿದ್ದರಾಮಯ್ಯ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಅಸಮರ್ಥ ಮುಖ್ಯಮಂತ್ರಿಯಾಗಿದ್ದು, ಈ ಸರ್ಕಾರ ಅತ್ಯಂತ ಭ್ರಷ ಸರ್ಕಾರವಾಗಿದ್ದು, ಜನರು ಈ ಸರ್ಕಾರವನ್ನು ಶೀಘ್ರವೇ ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.

ನಾಳೆ ‘ಮಾಜಿ ಶಾಸಕ ಐವಾನ್ ನಿಗ್ಲಿ’ ನಿರ್ಮಾಣದ ‘ಸೆಪ್ಟೆಂಬರ್ 13’ ಚಿತ್ರ ತೆರೆಗೆ

JOB ALERT: ‘ಅಗ್ನಿವೀರ್ ಯೋಜನೆ’ಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Agniveer Recruitment

Share. Facebook Twitter LinkedIn WhatsApp Email

Related Posts

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

2 Mins Read
kukke

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಐತಿಹಾಸಿಕ ದಾಖಲೆ: ₹167.89 ಕೋಟಿ ಆದಾಯ

3 Mins Read

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

2 Mins Read
Recent News

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ: ಇಂದು ಅಧಿಕೃತವಾಗಿ ಸಿಎಂ ವಿಜಯ್ ಸರ್ಕಾರ ಸೇರಲಿರುವ ಎಐಎಡಿಎಂಕೆ ಬಂಡಾಯ ಬಣ!

kukke

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಐತಿಹಾಸಿಕ ದಾಖಲೆ: ₹167.89 ಕೋಟಿ ಆದಾಯ

BIG NEWS : ಭಾರತದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳಿವು : ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?

State News
KARNATAKA

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

By kannadanewsnow57 KARNATAKA 2 Mins Read

ಇಂದಿನ ಕಾಲದಲ್ಲಿ ಲೈಂಗಿಕತೆ ಅಥವಾ ಸಂಭೋಗದ ಬಗ್ಗೆ ಮಾತನಾಡುವುದು ಒಂದು ರೀತಿಯ ಸಂಕೋಚ ಅಥವಾ ಅಸಭ್ಯ ಎಂಬ ಭಾವನೆ ಅನೇಕರಲ್ಲಿದೆ.…

kukke

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಐತಿಹಾಸಿಕ ದಾಖಲೆ: ₹167.89 ಕೋಟಿ ಆದಾಯ

Fuel Saving Tips: ಪೆಟ್ರೋಲ್ ಹಾಕಿಸುವ ಮುನ್ನ ಈ ‘ಸೀಕ್ರೆಟ್’ ತಿಳಿದುಕೊಳ್ಳಿ; ನಿಮ್ಮ ಹಣ ಉಳಿತಾಯವಾಗುವುದು ಗ್ಯಾರಂಟಿ!

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.