ಮಂಗಳೂರು: ಜಿಲ್ಲೆಯ ಗಂಜಿಮಠದಲ್ಲಿರುವಂತ ಮಳಲಿ ಮಸೀದಿಯ ವಿವಾದ ಸಂಬಂಧ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್, ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ.
ಮಂಗಳೂರಿನ ಗಂಜಿಮಠದ ಮಳಲಿಯಲ್ಲಿ ಮಸೀದಿ ನವೀಕರಣದ ವೇಳೆಯಲ್ಲಿ ದೇಗುಲ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಮಸೀದಿ ಸರ್ವೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ ನಿಂದ ಮಂಗಳೂರಿನ ಹೆಚ್ಚುವರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
BIGG NEWS: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆ ಪಡೆದು ಪಾಸ್ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ವಿಹೆಚ್ ಪಿ ಸಲ್ಲಿಸಿದ್ದಂತ ಮಸೀದಿ ಸರ್ವೆ ಅರ್ಜಿಗೆ ಮಳಲಿ ಮಸೀದಿ ಆಡಳಿತ ಮಂಡಳಿಯಿಂದ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿತ್ತು. ಅಲ್ಲದೇ ಈ ಮಸೀದಿ ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಯಾಗಿದ್ದು, ಅಲ್ಲಿಯೇ ವಿಚಾರಣೆ ನಡೆಸುವಂತೆ ಕೋರಿತ್ತು.
ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದಂತ ಮಂಗಳೂರು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಮಳಲಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ.
ಮಧ್ಯಪ್ರದೇಶ: ಕಳಪೆ ರಸ್ತೆ ಕಾಮಗಾರಿಗಾಗಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ ಕೇಂದ್ರ ಸಚಿವ ʻನಿತಿನ್ ಗಡ್ಕರಿʼ
ನ್ಯಾಯಾಲಯ ತೀರ್ಪು ಸ್ವಾಗತಾರ್ಹ – ಶಾಸಕ ಡಾ.ಭರತ್ ಶೆಟ್ಟಿ ವೈ
ಮಳಲಿ ಮಸೀದಿ ಒಳಭಾಗದಲ್ಲಿ ಹಿಂದೂ ಧರ್ಮದ ಕುರುಹುಗಳಿರುವ ಕಟ್ಟಡದ ಕುರಿತ ವಿಚಾರಣೆ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇದೆ ಎಂದು ಕೋರ್ಟ್ ಹೇಳಿರುವುದು ಸ್ವಾಗತಾರ್ಹವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ವಿಚಾರ ಜನತೆಗೆ ತಿಳಿಯುವಂತಾಗಬೇಕು ಎಂದು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಹೊಸನಗರದಲ್ಲಿ ‘ಹೃದಯ ವಿದ್ರಾವಕ’ ಘಟನೆ : ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದ ಮಗ ಸಾವು
ನ್ಯಾಯಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಅವರು ಈ ವಿವಾದದ ಕುರಿತ ಇತರ ಅರ್ಜಿಗಳ ವಿಚಾರಣೆಗೆ ಜನವರಿ 8ಕ್ಕೆ ದಿನಾಂಕವನ್ನು ನ್ಯಾಯಾಲಯ ನಿಗದಿ ಮಾಡಿದೆ. ಮಳಲಿ ಮಸೀದಿ ಜಾಗ ವಕ್ಫ್ ಆಸ್ತಿ ಆಗಿರುವುದರಿಂದ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆ ಅಧಿಕಾರವಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಮಸೀದಿ ಪರ ವಕೀಲರ ವಾದಕ್ಕೆ ಮನ್ನಣೆ ದೊರೆತಿಲ್ಲ ಎಂದಿದ್ದಾರೆ.
BIGG NEWS : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ : ಹನಿ ನೀರಾವರಿಗಾಗಿ ಅರ್ಜಿ ಆಹ್ವಾನ
ವಕ್ಫ್ ಕೂಡ ನಮ್ಮ ಸರಕಾರದ ಅಂಗವಾಗಿರುವುದರಿಂದ ಅದಕ್ಕೆ ಬೇರೆ ನ್ಯಾಯಲಯ, ಕಾನೂನು ಎಂಬ ಭಾವನೆ ಬೇಡ. ನ್ಯಾಯಾಲಯವು ವಿಚಾರಣೆ ನಡೆಸಿ ಸೂಕ್ತ ತೀರ್ಪು ಹೊರಬರುವ ವಿಶ್ವಾಸವನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.