ಮೈಸೂರು: ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ, ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಪ್ರಕರಣ ಸಂಬಂಧ ಮೈಸೂರಿನಲ್ಲಿ ಪ್ರಮುಖ ಆರೋಪಿ ಶಾರೀಕ್ ಗೆ ಮನೆ ಬಾಡಿಗೆ ನೀಡಿದಂತ ಮಾಲೀಕ, ಮೊಬೈಲ್ ನೀಡಿದಂತ ಅಂಗಡಿ ಮಾಲೀಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಸಂಬಂಧ ಪೊಲೀಸರು ಮೈಸೂರಿನಲ್ಲಿ ಶಂಕಿತ ಉಗ್ರನಿಗೆ ಮನೆ ಬಾಡಿಗೆ ನೀಡಿದಂತ ಮನೆ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಇವರಷ್ಟೇ ಅಲ್ಲದೇ ಶಂಕಿತ ಉಗ್ರ ತಾರೀಕ್ ಗೆ ಮೊಬೈಲ್ ನೀಡಿದ್ದಂತ ಮೊಬೈಲ್ ಅಂಗಡಿ ಮಾಲೀಕ ಹಾಗೂ ಅಂಗಡಿಯಲ್ಲಿನ ಮತ್ತೋರ್ವ ನೌಕರರನ್ನು ಬಂಧಿಸಿದ್ದಾರೆ.
ಮೈಸೂರು ಪೊಲೀಸರು ಈ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಮಂಗಳೂರಿಗೆ ತೆರಳಿರೋದಾಗಿ ತಿಳಿದು ಬಂದಿದೆ.