Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕ್ರಿಮಿಯಾದಲ್ಲಿ ರಷ್ಯಾದ ಸೇನಾ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲಾ 29 ಮಂದಿ ದಾರುಣ ಸಾವು

01/04/2026 9:38 AM

ಶೃಂಗಾರದಲ್ಲೂ ಪರಿಸರ ಪ್ರೇಮ: 2026ರಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿದೆ ‘ಗ್ರೀನ್ ಸೆಕ್ಸ್’ ಟ್ರೆಂಡ್.!

01/04/2026 9:38 AM

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ
KARNATAKA

ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ

By kannadanewsnow0914/02/2026 7:59 PM

ಮಂಡ್ಯ : ಮದ್ದೂರು ನಗರಸಭೆಗೆ 4 ಗ್ರಾಮ ಪಂಚಾಯತಿಗಳ ಸೇರ್ಪಡೆ ವಿರೋಧಿಸಿ ತಾಲೂಕಿನ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾ.ಪಂಗಳ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಯಾವುದೇ ಒಮ್ಮತಕ್ಕೆ ಬಾರದ ಕಾರಣ ಸಭೆ ವಿಫಲವಾಯಿತು.

ಮದ್ದೂರು ತಾಲೂಕಿನ ನಾಲ್ಕು ಗ್ರಾ.ಪಂ.ಗಳಾದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ವ್ಯಾಪ್ತಿಯ ಗ್ರಾಮಗಳನ್ನು ನಗರಸಭೆಗೆ ಸೇರಿಸಿಕೊಂಡಿರುವ ಬಗ್ಗೆ ಪ್ರಮುಖವಾಗಿ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ 2 ಗ್ರಾಪಂಗಳ ಗ್ರಾಮಸ್ಥರು ಹಾಗೂ ಮುಖಂಡರು ಹಲವು ದಿನಗಳಿಂದ ಗ್ರಾಪಂ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ಕರೆಯಲಾಗಿತ್ತು.

ಪ್ರತಿಭಟನೆಯನ್ನು ನಿಲ್ಲಿಸುವಂತೆ ಸಚಿವ ಚಲುವರಾಯಸ್ವಾಮಿ , ಶಾಸಕ ಕೆ.ಎಂ.ಉದಯ್ ಹಾಗೂ ಜಿಲ್ಲಾಡಳಿತ ಮನವಿ ಮಾಡಿತು. ಆದರೆ ನಮಗೆ ನ್ಯಾಯ ಸಿಗವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ. ಈಗಾಗಲೇ ಸಂಬಂಧಪಟ್ಟ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಗ್ರಾಮಸ್ಥರು ಹಾಗೂ ಮುಖಂಡರ ಬೇಡಿಕೆಗಳನ್ನು ಮುಖ್ಯಮಂತ್ರಿ, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ, ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ಗ್ರಾಮಗಳ ಹಾಗೂ ಗ್ರಾಪಂಗಳ ಉಳಿವಿಗಾಗಿ ಹಲವು ದಿನಗಳಿಂದ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಪಂಚಾಯಿತಿಗಳ ಆವರಣದಲ್ಲಿ ಸ್ಥಳಿಯ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಹೋರಾಟ ಮಾಡುತ್ತಿದ್ದು, ನಮ್ಮ ಹೋರಾಟದ ಉದ್ದೇಶಗಳ ಬಗ್ಗೆ ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರಿಗೆ ತಿಳಿಸಿದ್ದೇವೆ. ಸರ್ಕಾರದ ಗಮನಕ್ಕೆ ತಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೈ ಬಿಡುವ ವಿಚಾರವನ್ನು ಕಾನೂನಿನ ವ್ಯಾಪ್ತಿಯಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದರು.

ಮದ್ದೂರು ನಗರಸಭೆಯಿಂದ 4 ಗ್ರಾಮ ಪಂಚಾಯಿಗಳನ್ನು ಸರ್ಕಾರ ಕೈ ಬಿಡುವಂತೆ ಈಗಾಗಲೇ ಹಲವು ರೀತಿಯ ಪ್ರತಿಭಟನೆಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸಚಿವರು ಸಂಧಾನ ಸಭೆ ನಡೆಸಿದ್ದು, ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಅನಿರ್ಧಿಷ್ಟಾವಧಿ ಧರಣಿ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಚಲುವರಾಯಸ್ವಾಮಿ

ನಾಗಮಂಗಲ ತಾಲೂಕಿನ ನಲ್ಕುಂದ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದು ತಪ್ಪು ಕಂಡು ಬಂದರೇ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಂ.ಉದಯ, ಜಿಲ್ಲಾಧಿಕಾರಿ ಕುಮಾರ, ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ತಹಸೀಲ್ದಾರ್ ಪರುಶರಾಮ್ ಸತ್ತಿಗೇರಿ, ಇಓ ರಾಮಲಿಂಗಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐಗಳಾದ ನವೀನ್, ನಾರಾಯಿಣಿ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಸ್ಥರು, ರೈತ ಮುಖಂಡರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ನವದೆಹಲಿ ಸಂಚಾರ ಸಮಸ್ಯೆ: ಫೆ.16ರಿಂದ 20ವರೆಗೆ ವಕೀಲರಿಗೆ ‘ವರ್ಚುಲ್’ ಆಗಿ ಬಾಗಿಗೆ ಸುಪ್ರೀಂ ಕೋರ್ಟ್ ಆವಕಾಶ

BIG NEWS: ಪೊಲೀಸ್ ಬ್ಯಾರಿಕೇಡ್ ಹಾಕಿದ ಹಣ ಪಾವತಿಸಿ: ಮೃತ ಪಿ.ರಾಮಯ್ಯ ಕುಟುಂಬಕ್ಕೆ ಬಿಲ್ ಕೊಟ್ಟ ರಾಜ್ಯ ಸರ್ಕಾರ, KUWJ ಖಂಡನೆ

Share. Facebook Twitter LinkedIn WhatsApp Email

Related Posts

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM2 Mins Read

ALERT : ನೀವು ಬಳಸುವ ದಿಂಬನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ!

01/04/2026 9:15 AM2 Mins Read

ಡೈಲಿಹಂಟ್ ಮಾತೃಸಂಸ್ಥೆ ‘ವರ್ಸ್ ಇನ್ನೋವೇಶನ್’ ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ

01/04/2026 9:09 AM2 Mins Read
Recent News

BREAKING: ಕ್ರಿಮಿಯಾದಲ್ಲಿ ರಷ್ಯಾದ ಸೇನಾ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲಾ 29 ಮಂದಿ ದಾರುಣ ಸಾವು

01/04/2026 9:38 AM

ಶೃಂಗಾರದಲ್ಲೂ ಪರಿಸರ ಪ್ರೇಮ: 2026ರಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿದೆ ‘ಗ್ರೀನ್ ಸೆಕ್ಸ್’ ಟ್ರೆಂಡ್.!

01/04/2026 9:38 AM

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

01/04/2026 9:27 AM

SHOCKING : ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಸೇವನೆ: ಮಹಿಳೆಯ ತುಟಿಗಳಲ್ಲಿ ಊತ, ಮಗನಿಗೆ ಅತಿಸಾರ!

01/04/2026 9:22 AM
State News
KARNATAKA

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ : ರಾಜ್ಯದಲ್ಲಿ ಕರೆಂಟ್, ಟೋಲ್, ನೀರಿನ ದರ ಏರಿಕೆ.!

By kannadanewsnow5701/04/2026 9:27 AM KARNATAKA 2 Mins Read

ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1ರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ. ವಿದ್ಯುತ್, ನೀರು ಮತ್ತು…

ALERT : ನೀವು ಬಳಸುವ ದಿಂಬನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ!

01/04/2026 9:15 AM

ಡೈಲಿಹಂಟ್ ಮಾತೃಸಂಸ್ಥೆ ‘ವರ್ಸ್ ಇನ್ನೋವೇಶನ್’ ಆಡಳಿತ ಮಂಡಳಿಗೆ ಪಿ.ಆರ್. ರಮೇಶ್ ನೇಮಕ

01/04/2026 9:09 AM

ಜಂತುಹುಳು ಸಮಸ್ಯೆ ನಿವಾರಣೆ: ಇಲ್ಲಿದೆ ಪರಿಣಾಮಕಾರಿ ಮನೆಮದ್ದು ಮತ್ತು ಚಿಕಿತ್ಸೆ!

01/04/2026 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.