ಮಂಡ್ಯ: ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡ ( BJP Leader ) ಕಂ ಚಿನ್ನದ ವ್ಯಾಪಾರಿಯನ್ನು ಹನಿಟ್ರ್ಯಾಫ್ ( Honey Trap ) ಮಾಡಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ದಾಖಲಿಸಿಕೊಂಡಿರುವಂತ ಎಫ್ಐಆರ್ ವಿಷಯದಲ್ಲಿನ ಅಂಶಗಳಿಂತ, ಅಲ್ಲಿ ಅಸಲಿಗೆ ನಡೆದಿದ್ದೇ ಬೇರೆಯಾಗಿದೆ. ಅದೇನು ಅಂತ ಮುಂದೆ ಸುದ್ದಿ ಓದಿ.
ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ಬಿಜೆಪಿ ಮುಖಂಡ ಕಂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಲ್ಮಾ ಗ್ಯಾಂಗ್ ದರ್ಶನ್ ಲಾಡ್ಜ್ ಮೇಲೆ ದಾಳಿ ನಡೆಸಿದಂತ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ಕಾಲೇಜು ಉಪನ್ಯಾಸಕ ಎಂಬುದಾಗಿ ಮಾಹಿತಿ ನೀಡಿ, ರೂಂ ಪಡೆದಿದ್ದರು ಎಂದು ತಿಳಿದು ಬಂದಿದೆ.
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ
ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ರೂಂ ಪಡೆದು, ಯುವತಿಯೊಂದಿಗೆ ಜಗನ್ನಾಥ ಶೆಟ್ಟಿ ಇರೋ ಮಾಹಿತಿ ತಿಳಿದಂತ ಸಲ್ಮಾ ಗ್ಯಾಂಗ್, ದಿಢೀರ್ ಅವರ ರೂಂ ಗೆ ದಾಳಿ ನಡೆಸಿತ್ತು. ದಾಳಿಯ ವೇಳೆಯಲ್ಲಿ ವೀಡಿಯೋ ಕೂಡ ಚಿತ್ರೀಕರಣ ಮಾಡಿಕೊಂಡಿತ್ತು. ಜೊತೆಗೆ ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿಯವರನ್ನು ಮನಬಂಧಂತೆ ಥಳಿಸಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
BIG NEWS: ಬೆಂಗಳೂರಿನಲ್ಲಿ ಭಾರೀ ಮಳೆಗೆ 600 ಮನೆ, 130 ಅಪಾರ್ಮೆಂಟ್ ಜಲಾವೃತ: 4,500 ಕುಟುಂಬಗಳು ಕಂಗಾಲು
ಅಂದಹಾಗೇ ಈಗಾಗಲೇ ಈ ಪ್ರಕರಣದಲ್ಲಿ ಮಂಡ್ಯ ಪಶ್ಚಿಮ ವಿಭಾಗದ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು, ಸಲ್ಮಾ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.